Advertisement

ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಗೆ ಒತ್ತಾಯ

11:32 AM May 08, 2020 | Naveen |

ಹರಿಹರ: ದಾವಣಗೆರೆಯಿಂದ ಮದ್ಯ ಖರೀದಿಗೆಂದು ಬರುವವರನ್ನು ತಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಗುರುವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ದಿನ ನಿತ್ಯ ದಾವಣಗೆರೆಯಿಂದ ನೂರಾರು ಸಂಖ್ಯೆಯ ಮದ್ಯಪ್ರಿಯರು ಬಂದು ನಗರದ ಮದ್ಯದಂಗಡಿಗಳ ಮುಂದೆ ತಾಲೂಕಿನ ಜನರೊಂದಿಗೆಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇವರಿಂದ ಇಲ್ಲಿನ ಜನರಿಗೂ ಕೋವಿಡ್ ವೈರಸ್‌ ಹರಡುವ ಅಪಾಯವಿದೆ. ಆದ್ದರಿಂದ ಅಧಿಕಾರಿಗಳು ಕೂಡಲೆ ಎಚ್ಚೆತ್ತು ತಾಲೂಕಿನ ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಮಾಡಬೇಕು. ಮದ್ಯದಂಗಡಿ ಮುಂದೆ ಸಾಲಿನಲ್ಲಿ ನಿಂತವರ ಆಧಾರ್‌ ಕಾರ್ಡ್‌ ಪರಿಶೀಲಿಸಬೇಕು. ಸಾಧ್ಯವಾಗದಿದ್ದರೆ ತಾಲೂಕಿನ ಮದ್ಯದಂಗಡಿಗಳನ್ನು ಮುಂದಿನ 15 ದಿನಗಳವರೆಗೆ ಬಂದ್‌ ಮಾಡಿಸಬೇಕೆಂದು ಆಗ್ರಹಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಮುಖ್ಯ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಕೆಲವೆಡೆ ಪೊಲೀಸ್‌ ಚೌಕಿ, ತಪಾಸಣೆ ಮಾಡಲಾಗುತ್ತಿದೆ. ರೈತರು ಹೊಲ-ಗದ್ದೆಗಳಿಗೆ ಹೋಗಲು ಬಳಸುವ ಬಂಡಿ ರಸ್ತೆಗಳ ಮೂಲಕ ದಾವಣಗೆರೆ ಜನರು ಬರುತ್ತಿರುವ ಮಾಹಿತಿಯಿದೆ. ಆದರೆ ಮದ್ಯದಂಗಡಿ ಬಂದ್‌ ಮಾಡಿಸಲು ನಮಗೆ ಅಧಿಕಾರವಿಲ್ಲ. ಪರಸ್ಥಳದವರು ಬರದಂತೆ ತಡೆಯಲು ಪೊಲೀಸರಿಗೆ ಸೂಚಿಸುವುದಾಗಿ ತಿಳಿಸಿದರು. ಕರವೇ ಜಿಲ್ಲಾ ಉಪಾಧ್ಯಕ್ಷ ನಾಗರಾಜ್‌ ಮೆಹರವಾಡೆ, ತಾಲೂಕುಅಧ್ಯಕ್ಷ ನಾಗರಾಜ್‌ ಗೌಡ, ಬಿ. ಮಗ್ದುಂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next