Advertisement

ಪಾಮೇನಹಳ್ಳಿ ಗ್ರಾಮದಲ್ಲಿ ಕೋವಿಡ್ ಅಮ್ಮನ ಹಬ್ಬ ಆಚರಣೆ

06:56 PM Jun 29, 2020 | Naveen |

ಹರಿಹರ: ತಾಲೂಕಿನ ಪಾಮೇನಹಳ್ಳಿ ಗ್ರಾಮದ ಜನರು ಶನಿವಾರ ಗ್ರಾಮದಲ್ಲಿ ಕೋವಿಡ್ ಅಮ್ಮನ ಹಬ್ಬ ಆಚರಿಸಿ ಎಡೆ ಸಮರ್ಪಿಸಿದರು. ಗ್ರಾಮದ ಹಿರಿಯರು ಚರ್ಚಿಸಿ ಕೋವಿಡ್ ಅಮ್ಮನ ಹಬ್ಬದಾಚರಣೆಗೆ ಒಮ್ಮತದ ನಿರ್ಣಯ ಕೈಗೊಂಡರು.

Advertisement

ನಂತರ ಗ್ರಾಮದಲ್ಲಿ ಡಂಗೂರ ಸಾರಲಾಯಿತು. ಅದರ ಪ್ರಕಾರ ಮಹಿಳೆಯರು ಮನೆಯಲ್ಲಿ ಹೋಳಿಗೆ ಇತರೆ ಹಬ್ಬದಡುಗೆ ತಯಾರಿಸಿದರು. ಗ್ರಾಮದ 200ಕ್ಕೂ ಹೆಚ್ಚು ಮನೆಗಳಿಂದ ರೇಣುಕಾಯಲ್ಲಮ್ಮ ದೇವಸ್ಥಾನಕ್ಕೆ ಹೋಳಿಗೆ, ಕಾಯಿ, ಹಣ್ಣು ಇಟ್ಟು ಎಡೆ ಮಾಡಿಸಲು ತರಲಾಯಿತು. ಬಳಿಕ ಪೂಜಾರ್‌ ಈರಬಸಪ್ಪ ಅವರು ವಿಶೇಷ ಪೂಜೆ ನೆರವೇರಿಸಿದರು.

ತದನಂತರ ಗ್ರಾಮದ ಗಡಿಗೆ ತೆರಳಿದ ಎಡೆ ಇಟ್ಟು ಪೂಜೆ ಸಲ್ಲಿಸಿದ ಗ್ರಾಮಸ್ಥರು, ಮನೆಗಳಿಗೆ ತೆರಳಿ ಹಬ್ಬದೂಟವನ್ನು ಸವಿದರು. ಗ್ರಾಮದ ಮುಖಂಡ ಶಂಭೋಜಿ ಹನುಮಂತಪ್ಪ, ಗ್ರಾಪಂ ಸದಸ್ಯಬಣಕಾರ್‌ ಕೃಷ್ಣೋಜಿ ರಾವ್‌, ಆನಂದ ರಾವ್‌, ನಂದಿಗಾವಿ ಬಸವರಾಜ್‌, ಬಣಕಾರ್‌ ಸುರೇಶ್‌, ಅಭಿಷೇಕ್‌ಎ.ಎಸ್‌. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next