ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆ ಕಟ್ಟಡದಲ್ಲಿರುವ ಜನೌಷಧಿ ಕೇಂದ್ರ ಕಳೆದೆರಡು ತಿಂಗಳಿನಿಂದ ಮಧ್ಯಾಹ್ನಕ್ಕೆ ಬಾಗಿಲು ಮುಚ್ಚುತ್ತಿದ್ದು, ಅಗತ್ಯ ಔಷಧಿ ದೊರೆಯದೆ ರೋಗಿಗಳು ಪರದಾಡುವಂತಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಮಾ.25ರಂದು ಲಾಕ್‌ಡೌನ್ ಆರಂಭವಾದಗಿದ್ದರೂ ಆಸ್ಪತ್ರೆ, ಔಷಧಾಲಯಗಳು ಎಂದಿನಂತೆ ಕಾರ್ಯ ನಿರ್ವಹಿಸಬೇಕಿದೆ. ಆದರೆ ಸರ್ಕಾರದ ಎಂಎಸ್‌ಐಎಲ್ (ಮೈಸೂರು ಸೇಲ್ಸ್‌ಇಂಟರ್ ನ್ಯಾಷನಲ್ ಲಿಮಿಟೆಡ್) ಅಧೀನದಲಿ ಬರುವ ನಗರದ ಜನ ಔಷಧಿ ಕೇಂದ್ರ ಮಾತ್ರ ವಾರದಲ್ಲಿ 2-3 ದಿನ ಬಾಗಿಲೆ ತೆರೆಯುವುದಿಲ್ಲ. ತೆರೆದರೂ ಮಧ್ಯಾಹ್ನಕ್ಕೆ ಬಂದ್ ಮಾಡಲಾಗುತ್ತಿದೆ.
ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಕಾರ್ಯಾವ ಇದ್ದರೂ ಇಲ್ಲಿನ ಸಿಬ್ಬಂದಿ ಬೆಳಿಗ್ಗೆ 10 ಗಂಟೆ ವೇಳೆಗೆ ಆಗಮಿಸಿ, ಮಧ್ಯಾಹ್ನ 1ಕ್ಕೆ ಬಂದ್ ಮಾಡಿಕೊಂಡು ತೆರಳುತ್ತಿದ್ದಾರೆ. ಪರಿಣಾಮ ರೋಗಿಗಳು 30-50 ರೂ.ಗೆ ಇಲ್ಲಿ ಸಿಗುವ ಔಷಧಿಯನ್ನು ಖಾಸಗಿ ಅಂಗಡಿಗಳಲ್ಲಿ 150-200 ರೂ. ಕೊಟ್ಟು ಖರೀದಿಸುವ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರವು ನಿಗದಿತ ಸಮಯ ಪೂರ್ಣ ಕಾರ್ಯ ನಿರ್ವಹಣೆ ಮಾಡಬೇಕು. ಮಧ್ಯಾಹ್ನಕ್ಕೆ ಬಂದ್ ಮಾಡುತ್ತಿರುವುದು ಸರಿಯಲ್ಲ. ಸಂಬಂಧಿತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ರವಿ ಕುಮಾರ್,
ಡಿಜಿಎಂಎಂಎಸ್
ಐಎಲ್, ಜನೌಷಧಿ ವಿಭಾಗ, ಬೆಂಗಳೂರು