Advertisement
ಪೀಠದ ಆವರಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ಜ.14ರ ಬೆಳಿಗ್ಗೆ 11-30ಕ್ಕೆ ವೀರರಾಣಿ ಕಿತ್ತೂರು ಚನ್ನಪ್ಪ ವೇದಿಕೆಯಲ್ಲಿ ಹರಜಾತ್ರಾ ಮಹೋತ್ಸವ ಹಾಗೂ ಯುವ ಸಮಾವೇಶಕ್ಕೆ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡುವರು.
ಮಾಚಿದೇವ ಶ್ರೀ ಮತ್ತಿತರೆ ವಿವಿಧ ಸಮಾಜಗಳ ಶ್ರೀಗಳು ಭಾಗವಹಿಸವರು. ಬೆಳಿಗ್ಗೆ 8-30ಕ್ಕೆ ಅಕ್ಕಮಹಾದೇವಿ ವಚನ ವಿಜಯೋತ್ಸವವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಉದ್ಘಾಟಿಸುವರು. ಸಂಕ್ರಾಂತಿ ಸಂಭ್ರಮ, ಕುಂಭಮೇಳ ಹಾಗೂ ಜಾನಪದ ಕಲಾಮೇಳದಲ್ಲಿ ಅಕ್ಕಮಹಾದೇವಿಯ ವಚನ ಕಟ್ಟುಗಳನ್ನು ಆನೆ ಅಂಬಾರಿಯಲ್ಲಿಸಿರಿ ಹರಿಹರೇಶ್ವರ ದೇವಸ್ಥಾನದಿಂದ ಶ್ರೀಕಾಂತ ಚಿತ್ರಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು.
Related Articles
Advertisement
ಮಧ್ಯಾಹ್ನ 3ಕ್ಕೆ ಪೀಠದ ದಶಮಾನೋತ್ಸವ ಹಾಗೂ ತಮ್ಮ ದ್ವಿತೀಯ ಪೀಠಾರೋಹಣ ಸಮಾರಂಭವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ ಉದ್ಘಾಟಿಸುವರು. ಧರ್ಮದರ್ಶಿ ಬಿ.ಸಿ.ಉಮಾಪತಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಮಾತನಾಡಿ, ಶ್ರೀಪೀಠ ಆರಂಭದಿಂದಲೂ ಸಮಾಜದ ಜನರ ನೋವುಗಳಿಗೆ ಸ್ಪಂದಿಸುತ್ತಿದೆ. ಶ್ರೀಗಳು ಪೀಠಾಧಿಪತಿಯಾಗಿ ಕೇವಲ 20 ತಿಂಗಳಲ್ಲೆ ಅಭುತಪೂರ್ವ ಕಾರ್ಯ ನಿರ್ವಹಿಸಿದ್ದಾರೆ. ಪೀಠಕ್ಕೆ ಆಗಮಿಸಿದ ಬಳಿಕ 400ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ,ವಿದೇಶಗಳಲ್ಲೂ ಪೀಠದ ಕೀರ್ತಿ ಮೊಳಗಿಸಿದ್ದಾರೆ. ಬೆಳ್ಳಿ ಬೆಡಗು ಹಾಗೂ ಪ್ರಥಮ ಬಾರಿಗೆ ಆಯೋಜಿಸಿರುವ ಹರ ಜಾತ್ರಾ ಮಹೋತ್ಸವದಲ್ಲಿ ಹಲವು ವಿನೂತನ ಯೋಜನೆ ಆರಂಭಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು, ಲಕ್ಷಾಂತರ ಜನರಿಗೆ ಆಸನ, ಊಟ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಶುದ್ದ ಕುಡಿವ ನೀರು, ಮಜ್ಜಿಗೆ ವಿತರಣೆಯಿದೆ. ನಗರದ ಎಲ್ಲಾ ಕಲ್ಯಾಣ ಮಂಟಪಗಳಲ್ಲಿ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. 8 ಎಲ್‌ಇಡಿ ವಾಲ್, ಪೊಲೀಸ್ ಇಲಾಖೆಯ
ಸಹಕಾರದೊಂದಿಗೆ ಮಠದ ಸುತ್ತಮುತ್ತಲ ಖಾಲಿ ಜಾಗಗಳಲ್ಲಿ ಸುಸಜ್ಜಿತ ವಾಹನ ನಿಲ್ದಾಣ ನಿರ್ಮಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ 100ಕ್ಕೂ ಅಧಿಕ ಸಿಸಿಟಿವಿ ಅಳವಡಿಸಲಾಗುವುದು. ಆಂಬ್ಯುಲೆನ್ಸ್, ಬೆಂಕಿ ನಂದಿಸುವ ವಾಹನಗಳ ಸಜ್ಜುಗೊಳಸಲಾಗಿದೆ. ನಿರಂತರ ವಿದ್ಯುತ್‌ಗಾಗಿ ಪ್ರತ್ಯೇಕ ವಿದ್ಯುತ್ ಮಾರ್ಗ, ಪರಿವರ್ತಕ ಅಳವಡಿಸಲಾಗುತ್ತಿದೆ. ಮಾಧ್ಯಮದವರಿಗೆ ಮೀಡಿಯಾ ಸೆಂಟರ್ ತೆರೆಯಲಾಗುತ್ತಿದೆ. ಜಾತ್ರಾ ಮಹೋತ್ಸವ
ಸಮಿತಿ ಅಧ್ಯಕ್ಷ ಸಿ.ಆರ್. ಬಳ್ಳಾರಿ, ಧರ್ಮದರ್ಶಿಗಳಾದ ಬಿ.ಸಿ.ಉಮಾಪತಿ, ಚಂದ್ರಶೇಖರ ಪೂಜಾರ್, ಕರಿಬಸಪ್ಪ ಗುತ್ತೂರು ಮತ್ತಿತರರಿದ್ದರು.