Advertisement

ಭಗೀರಥರ ಕಾರ್ಯ ಅವಿಸ್ಮರಣೀಯ

06:30 PM May 01, 2020 | Team Udayavani |

ಹರಿಹರ: ತನ್ನ ಪೂರ್ವಜರಿಗೆ ಸದ್ಗತಿಯನ್ನು ದೊರಕಿಸಲು ಅವಿರತವಾಗಿ ಪ್ರಯತ್ನಿಸಿ ದೇವನದಿಯಾದ ಗಂಗೆಯನ್ನು ಭೂಲೋಕಕ್ಕೆ ತರುವ ಮೂಲಕ ಭರತ ಭೂಮಿಯನ್ನು ಸ್ವರ್ಗವಾಗಿ ಮಾಡಿದ ಭಗೀರಥ ಮಹರ್ಷಿಗಳ ಕಾರ್ಯ ಅವಿಸ್ಮರಣೀಯ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಹೇಳಿದರು.

Advertisement

ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ನಡೆದ ಭಗೀರಥ ಜಯಂತಿಯಲ್ಲಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕಠಿಣ ವಿಘ್ನಗಳು ಬಂದರೂ ಎದೆಗುಂದದೆ ಸತತ ಪ್ರಯತ್ನದಿಂದ ಕಾರ್ಯ ಸಾಧನೆಯಲ್ಲಿ ತೊಡಗಿದರೆ ಯಶಸ್ಸು ಸಿಕ್ಕೆ ಸಿಗುತ್ತದೆ ಎಂಬುದಕ್ಕೆ ಭಗೀರಥರು ಮಾದರಿಯಾಗಿದ್ದಾರೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್‌, ತಾಪಂ ಇಒ ಲಕ್ಷ್ಮೀಪತಿ, ನಗರಸಭೆ ಪೌರಾಯುಕ್ತೆ ಎಸ್‌. ಲಕ್ಷ್ಮೀ, ನಗರಸಭೆ ಪರಿಸರ ಅಭಿಯಂತರ ಮಹೇಶ್‌ ಕೊಡಬಾಳ್‌, ಆಹಾರ ನಿರೀಕ್ಷಕ ಬಸವರಾಜ್‌, ಶಿರಸ್ತೇದಾರ್‌ ಚನ್ನವೀರಪ್ಪ, ಸಿಬ್ಬಂದಿ ಸಂಗೀತಾ, ವೀಣಾ, ಸೌಮ್ಯ, ಭಾರತಿ, ಸುವರ್ಣ, ಸಂತೋಷ್‌, ಉಮೇಶ್‌, ಪ್ರಶಾಂತ್‌, ಫೈರೋಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next