ದಾವಣಗೆರೆ: ಅಕ್ರಮ ಮರುಳುಗಾರಿಕೆ-ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮಂಗಳವಾರ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಹರಿಹರ ತಾಲೂಕಿನ ಚಿಕ್ಕಬಿದರಿ ಮತ್ತು ಹರಪನಹಳ್ಳಿ ತಾಲೂಕಿನ ವಟ್ಲಹಳ್ಳಿ ಗ್ರಾಮಗಳ ನಡುವೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿಷಯದ ಬಗ್ಗೆ ಮಾಧ್ಯಮದ ಮೂಲಕ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟಂತಹ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ್ದೆ.
ಕ್ರಷರ್‌ನ ಮಾಲೀಕರ ಸಹೋದರರಾದ ಅಮರಾವತಿ ಮಂಜುನಾಥ್ ಮಂಗಳವಾರ ಮುಂಜಾನೆ ವಾಯುವಿಹಾರ ಮುಗಿಸಿ ಸಿ.ಜಿ. ಹಾಸ್ಪಿಟಲ್ ಮುಂಭಾಗದಲ್ಲಿರುವ ಇಂಡಿಯನ್ ಕಾಫಿ ಬಾರ್ ಬಳಿ ಇದ್ದಾಗ ಸ್ಥಳಕ್ಕೆ ಬಂದು ಎಲ್ಲಾ ವಿಚಾರಗಳನ್ನು ಯಾವ ಅಧಿಕಾರಿಗಳಿಗೂ ತಿಳಿಸದೆ ಸುಮ್ಮನಿರಿ. ನಮ್ಮ ವಿಚಾರಕ್ಕೆ ಬಂದರೆ ಚೆನ್ನಾಗಿರಲ್ಲ. ಅದು ಯಾವ ಧೈರ್ಯದಿಂದ ಹರಿಹರಕ್ಕೆ ಬರುತ್ತೀಯಾ, ಯಾವುದೇ ಕಾರಣಕ್ಕೂ ನಿನ್ನನ್ನು ಉಳಿಸಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಅಮರಾವತಿಯ ಮಂಜುನಾಥ್‌ನನ್ನು ತಕ್ಷಣ ಬಂಧಿಸಿ ಅಕ್ರಮ ಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು ಹಾಗೂ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ನನಗೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.