Advertisement

ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ

10:04 AM Feb 03, 2020 | mahesh |

ಹಣ್ಣುಗಳನ್ನು ಮಾರಿ ಬಂದ ಹಣದಿಂದ ಶಾಲೆಯನ್ನು ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಹಾಜಬ್ಬರ ಹೆಸರು ಮಂಗಳೂರಿನ ಹಳ್ಳಿಯಿಂದ ದಿಲ್ಲಿಗೆ ತಲುಪಿದೆ. ನಿಷ್ಕಾಮ ಸೇವಾಭಾವದ ಹಾಜಬ್ಬರದು ಪ್ರಶಸ್ತಿ ಬಂದಾಗ ಹಿಗ್ಗದ ನಿರ್ಲಿಪ್ತ ಭಾವ. ಅಕ್ಷರ ಕಲಿಯದಿದ್ದರೂ ಅವರು ನಿಜವಾದ ಅಕ್ಷರ ಸಂತ.

Advertisement

ಕಿತ್ತಳೆ ಹಣ್ಣಲ್ಲ
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಬರಿಯ ಹಣ್ಣಲ್ಲ
ಅವರು ಮಾರುವುದು ಕಿತ್ತಳೆ ಹಣ್ಣು
ಕಿತ್ತಳೆ ಹೊತ್ತು ಹೊತ್ತು ಮಾರಿದರೂ
ಮನೆಯ ಮೇಲೊಂದು ಸೂರು ತನ್ನದೇ ಸಂಸಾರಕ್ಕೆ
ಸ್ವಂತ ಮಕ್ಕಳಿಗೆ ಶಾಲೆ ಸುಣ್ಣಬಣ್ಣ ಗೋಡೆನೆಲಕ್ಕೆ
ಏನಿಲ್ಲ ಏಕೆಂದರೆ ಅವರಿಗೆ ಕಿತ್ತಳೆ ಹಣ್ಣಲ್ಲ
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಬರಿಯ ಹಣ್ಣಲ್ಲ
ಅಕ್ಷರ ಸಂತನಿಗೆ ಓದು ಬರಹ ಕಿತ್ತಳೆ ಹಣ್ಣು
ಮಕ್ಕಳ ಕಣ್ಣ ಬೆಳಕು ಬುಟ್ಟಿ ಕಿತ್ತಳೆ ಹಣ್ಣು
ಕೈಯಲ್ಲಿ ಅರ್ಜಿ ಕಣ್ಣಲ್ಲಿ ಮಾತಿನ ಈ ತಬರ
ಸೋತಿಲ್ಲ ತೇಜಸ್ವಿ ಹಾಜಬ್ಬರಿಗೆ ಕಿತ್ತಳೆ ಹಣ್ಣಲ್ಲ
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಬರಿಯ ಹಣ್ಣಲ್ಲ
ಹಾಜಬ್ಬ ಕಟ್ಟಿದ ಶಾಲೆಗೆ ನೆಲ ಗೋಡೆ ಕಿತ್ತಳೆ ಹಣ್ಣು
ಕಿಟಿಕಿ ಬಾಗಿಲು ಮಕ್ಕಳ ಬಟ್ಟಲ ಅನ್ನ ಕಿತ್ತಳೆ ಹಣ್ಣು
ಆಟದ ಬಯಲು ತೋಟದ ಹೂವು ಕಿತ್ತಳೆ ಹಣ್ಣು
ಮನಸು ಕನಸು ಹಾಜಬ್ಬರಿಗೆ ಅದೆ ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಬರಿಯ ಹಣ್ಣಲ್ಲ
ನಾವೂ ನೀವೂ ಕೊಂಡಿದ್ದೇವೆ ಕಿತ್ತಳೆ ಹಣ್ಣು
ನಮಗೆಲ್ಲಿ ಕಂಡೀತು ಕಿತ್ತಳೆಯ ನಿಜ ಬಣ್ಣ
ಅದು ಬರಿ ಕಿತ್ತಳೆ ಅಂದವರುಂಟೆ ಮರುಳೆ
ಹಾಜಬ್ಬರಿಗೆ ಅದು ಅರಿವಿನ ಮಂತ್ರದಂಡ!
ಕಿತ್ತಳೆ ಹಣ್ಣಲ್ಲ
ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ
ಕಿತ್ತಳೆ ಹಣ್ಣಲ್ಲ

ಹಾಗಾದರೆ….

ಕೆ. ಚಿನ್ನಪ್ಪ ಗೌಡ

Advertisement

Udayavani is now on Telegram. Click here to join our channel and stay updated with the latest news.

Next