Advertisement

ಆಮೆ ಮತ್ತು ಮೊಲದ ಓಟ : ಅತೀ ಉತ್ಸಾಹವೇ ಈತನಿಗೆ ಮುಳುವಾಯ್ತು!!

04:01 PM Mar 29, 2023 | Team Udayavani |

ಖಾಂಡ್ವಾ (ಮಧ್ಯಪ್ರದೇಶ) : ನೀವು ಆಮೆ ಮತ್ತು ಮೊಲದ ನಡುವಿನ ಓಟದ ಕಥೆ ಕೇಳಿದ್ದೀರಿ ಅಲ್ಲವೇ, ಶರವೇಗದಲ್ಲಿ ಓಡಿದ ಮೊಲ ನಿದ್ರೆಗೆ ಶರಣಾಗಿ ಕೊನೆಗೆ ಆಮೆಯೇ ಮೊದಲು ಗುರಿ ತಲುಪುತ್ತದೆ. ಇದೆ ರೀತಿಯ ಕುತೂಹಲಕಾರಿ ಘಟನೆಯೊಂದು ಅರಣ್ಯ ರಕ್ಷಕರ ನೇಮಕಾತಿ ವೇಳೆ ಮಧ್ಯಪದೇಶದಲ್ಲಿ ನಡೆದಿದೆ.

Advertisement

ಖಾಂಡ್ವಾದಲ್ಲಿ ಅರಣ್ಯ ರಕ್ಷಕರ ನೇಮಕಾತಿ ಪರೀಕ್ಷೆಯ ವೇಳೆ ಈ ಘಟನೆ ನಡೆದಿದ್ದು, ರಾಜ್ಯಾದೆಲ್ಲೆಡೆಯ ಸ್ಪರ್ಧಿಗಳು ಓಟದಲ್ಲಿ ಭಾಗವಹಿಸಲು ಆಗಮಿಸಿದ್ದರು, ಇದು ಮೊದಲ ದೈಹಿಕ ಪರೀಕ್ಷೆಯಾಗಿದ್ದು,ಅಭ್ಯರ್ಥಿಗಳಲ್ಲಿಒಬ್ಬನಾದ ಗ್ವಾಲಿಯರ್‌ನ ದಾಬ್ರಾದ ಯುವಕ ಪಹಾದ್ ಸಿಂಗ್ 24 ಕಿಲೋಮೀಟರ್ ಓಟದಲ್ಲಿ ಆರಂಭಿಕ ಭಾರಿ ಮುನ್ನಡೆ ಸಾಧಿಸಿದ್ದ . ಹೇಗೂ ನಾನು ಮುನ್ನಡೆಯಲ್ಲಿದ್ದೇನೆ ಎಂದು ಅತ್ಯುತ್ಸಾಹದಿಂದ ವಿಶ್ರಾಂತಿಗೆಂದು ಕುಳಿತು ನಿದ್ದೆಗೆ ಜಾರಿದ್ದಾನೆ. ಸ್ಪರ್ಧೆ ಮುಗಿದ ಬಳಿಕವೇ ಎಚ್ಚರಗೊಂಡಿದ್ದಾನೆ..!.

ಖಾಂಡ್ವಾದ ಅರಣ್ಯ ಅಧಿಕಾರಿ ಜೆಪಿ ಮಿಶ್ರಾ ಅವರ ಪ್ರಕಾರ,ಅರಣ್ಯದ ಅಂಚಿನಲ್ಲಿರುವ ಸಮುದಾಯಗಳಿಗೆ 38 ಅರಣ್ಯ ರಕ್ಷಕ ಹುದ್ದೆಗಳಿಗೆ ನೇಮಕಾತಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಪರೀಕ್ಷೆಗೆ ಒಟ್ಟು 114 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 24 ಕಿಲೋಮೀಟರ್ ಓಟವನ್ನು ನಾಲ್ಕು ಗಂಟೆಗಳಲ್ಲಿ ಪೂರ್ಣಗೊಳಿಸುವುದು ಪ್ರಾಥಮಿಕ ಗುರಿಯಾಗಿತ್ತು. ಪರೀಕ್ಷೆಯು ಮಾರ್ಚ್ 28 ರಂದು ಬೆಳಗ್ಗೆ 6.30 ಕ್ಕೆ ಪ್ರಾರಂಭವಾಯಿತು, ಒಂಬತ್ತು ಮಹಿಳೆಯರು ಮತ್ತು 52 ಪುರುಷರು ಸೇರಿದಂತೆ 61 ಅಭ್ಯರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧೆಯು ಬೆಳಿಗ್ಗೆ 10.30 ಕ್ಕೆ ಕೊನೆಗೊಂಡಾಗ, 60 ಸ್ಪರ್ಧಿಗಳು ಅಂತಿಮ ಗುರಿಯನ್ನು ಮುಟ್ಟಿದರು.ಆದರೆ ಪಹರ್ ಸಿಂಗ್ ಕಾಣೆಯಾಗಿದ್ದ. ತಂಡವೊಂದು ಆತನನ್ನು ಪತ್ತೆ ಹಚ್ಚಲು ಹೋದಾಗ, ಕೊನೆಯ ಚೆಕ್ ಪಾಯಿಂಟ್‌ನ ಮೊದಲು ಟ್ರ್ಯಾಕ್ ಬಳಿ ಮಲಗಿರುವುದು ಕಂಡುಬಂದಿದೆ.

ಎಚ್ಚರಗೊಂಡ ನಂತರ, ಪಹಾರ್ ಸಿಂಗ್ ತನ್ನ ಪಾದಗಳಲ್ಲಿ ಗುಳ್ಳೆಗಳಿಂದಾಗಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಕುಳಿತಿದ್ದೇನೆ ಮತ್ತು ಯಾವಾಗ ಗಾಢವಾದ ನಿದ್ರೆಗೆ ಜಾರಿದೆ ಎಂದು ತಿಳಿದಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next