Advertisement

ಹಾರ್ದಿಕ್‌ ಫಿಟ್ನೆಸ್ ‌ವಿಡಿಯೊ ವೈರಲ್‌

11:40 AM Jun 22, 2020 | mahesh |

ನವದೆಹಲಿ: ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಲಾಕ್‌ಡೌನ್‌ ಅವಧಿಯಲ್ಲಿ ವ್ಯಾಯಾಮ ನಡೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾಫ್ ಪುಷ್‌ ಅಪ್‌ ಪ್ರದರ್ಶಿಸುವ ಮೂಲಕ ಎಲ್ಲರನ್ನುಆಕರ್ಷಿಸಿದ್ದಾರೆ. ಇದೇ ವ್ಯಾಯಾಮವನ್ನು ಮಾಡುವಂತೆಸಹೋದರ ಕೃಣಾಲ್‌ ಪಾಂಡ್ಯಗೆ ಹಾರ್ದಿಕ್‌ ಸವಾಲು ಹಾಕಿದ್ದಾರೆ. “ಬಲವಾಗಿರುವ, ಇನ್ನೂ ನಿರ್ಮಾಣ ಹಂತದಲ್ಲಿರುವ ಫಿಟ್ನೆಸ್, ಸಹೋದರ ನಿಮಗೆಷ್ಟು ಹಾಫ್ ಪುಷ್‌ ಅಪ್‌ ತೆಗೆಯಲು ಸಾಧ್ಯವಾಗುತ್ತದೆ? ಎಂದು ಸವಾಲು ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಾಲಿವುಡ್‌ನ‌ ಅನೇಕ ನಟಿಯರು ಕೂಡ ಹಾರ್ದಿಕ್‌ ವಿಡಿಯೊಗೆ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next