Advertisement

ಪಾಂಡ್ಯ ಲಭಿಸಿದರೆ ಭಾರತಕ್ಕೆ ಲಾಭ: ಚಾಪೆಲ್‌

11:09 AM Jun 08, 2020 | mahesh |

ಮೆಲ್ಬರ್ನ್: ವರ್ಷಾಂತ್ಯದ ಆಸ್ಟ್ರೇಲಿಯ ಪ್ರವಾಸದ ಟೆಸ್ಟ್‌ ಸರಣಿ ವೇಳೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಲಭ್ಯರಾದರೆ ಅದರಿಂದ ಭಾರತಕ್ಕೆ ಭಾರೀ ಲಾಭವಿದೆ ಎಂಬುದಾಗಿ ಕಾಂಗರೂ ನಾಡಿನ ಮಾಜಿ ಕ್ರಿಕೆಟಿಗ ಗ್ರೆಗ್‌ ಚಾಪೆಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಭಾರತದ ಪಾಲಿಗೆ ಹಾರ್ದಿಕ್‌ ಪಾಂಡ್ಯ ಹೆಚ್ಚುವರಿ ಬೌಲಿಗ್‌ ಅವಕಾಶ ವನ್ನೊದಗಿಸಲಿದ್ದಾರೆ. ವೇಗದ ಬೌಲರ್‌ಗಳಿಗೆ ವಿಶ್ರಾಂತಿ ಬೇಕಾದಾಗ ಪಾಂಡ್ಯ ಅವರನ್ನು ಬಳಸಿಕೊಳ್ಳಬಹುದು. ಆಗ ಅವರು ತೃತೀಯ ಸೀಮರ್‌ ಆಗಿ ಪರಿಗಣಿಸಲ್ಪಡುತ್ತಾರೆ. ಇದರಿಂದ ಅವಳಿ ಸ್ಪಿನ್‌ ದಾಳಿಯನ್ನೂ ಭಾರತ ಸಂಘಟಿಸಬಹುದಾಗಿದೆ’ ಎಂದು ಚಾಪೆಲ್‌ ತಮ್ಮ ಅಂಕಣವೊಂದರಲ್ಲಿ ಬರೆದಿದ್ದಾರೆ.

“ಪಾಂಡ್ಯ ಅವರ ಬ್ಯಾಟಿಂಗ್‌ ಕೂಡ ಗಮನಾರ್ಹ. ಅವರೋರ್ವ ಹಾರ್ಡ್‌ ಹಿಟ್ಟರ್‌. ಕೀಪರ್‌ ರಿಷಭ್‌ ಪಂತ್‌ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದರೆ, ಪಾಂಡ್ಯ 7ನೇ ಕ್ರಮಾಂಕದಲ್ಲಿ ಇಳಿಯಬಹುದು…’ ಎಂದಿದ್ದಾರೆ ಗ್ರೆಗ್‌ ಚಾಪೆಲ್‌.

ಸ್ಪಿನ್‌ ಆಯ್ಕೆಯೇ ಸವಾಲು
“ಈ ಸರಣಿಗಾಗಿ ಸ್ಪಿನ್ನರ್‌ಗಳ ಆಯ್ಕೆ ಭಾರತಕ್ಕೆ ತಲೆನೋವಾಗಿ ಪರಿಣಮಿಸ ಬಹುದು. ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌ ನಡುವೆ ಇಲ್ಲಿ ಪೈಪೋಟಿ ಇರಲಿದೆ. ಅಶ್ವಿ‌ನ್‌ ದಾಖಲೆ ಬೇರೆಲ್ಲ ಕಡೆ ಉತ್ತಮವಾಗಿದ್ದರೂ ಆಸ್ಟ್ರೇಲಿಯದಲ್ಲಿ ಅಷ್ಟೊಂದು ಗಮನಾರ್ಹ ಮಟ್ಟ ದಲ್ಲಿಲ್ಲ. ಜಡೇಜ ಆಲ್‌ರೌಂಡರ್‌ ಆಗಿದ್ದು, ತಮ್ಮ ಬೌಲಿಂಗನ್ನು ದೊಡ್ಡ ಮಟ್ಟದಲ್ಲಿ ಸುಧಾರಿಸಿಕೊಂಡಿದ್ದಾರೆ. ಇವರಿಬ್ಬರಿಗಿಂತ ರಿಸ್ಟ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಆಸ್ಟ್ರೇಲಿಯನ್ನ ರಿಗೆ ಭಾರೀ ಅಪಾಯ ವೊಡ್ಡುವ ಸಾಧ್ಯತೆ ಇದೆ’ ಎಂದು ಕಾಂಗರೂ ತಂಡದ ಮಾಜಿ ಕಪ್ತಾನ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next