Advertisement

ಆಸೀಸ್ ವಿರುದ್ಧದ ಸರಣಿಯಿಂದ ಹಾರ್ದಿಕ್ ಪಾಂಡ್ಯಾ ಔಟ್ –ಜಡೇಜಾ ವಾಪಸ್

09:46 AM Feb 21, 2019 | Team Udayavani |

ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ  ವಿರುದ್ಧದ ಐದು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟಿ-20 ಸರಣಿಯಿಂದ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಹೊರಬಿದ್ದಿದ್ದಾರೆ. ಏಕದಿನ ಸರಣಿಗೆ ಪಾಂಡ್ಯಾ ಸ್ಥಾನಕ್ಕೆ ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ.

Advertisement

ಗುರುವಾರ ಬಿಸಿಸಿಐ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಈ ಬದಲಾವಣೆಯನ್ನು ತಿಳಿಸಲಾಗಿದೆ. ಹಾರ್ದಿಕ್ ಪಾಂಡ್ಯಾ ಬೆನ್ನು ನೋವಿನಿಂದ ಬಳಲುತ್ತಿರುವುದರಿಂದ ಅವರ ಬದಲಿಗೆ ಆಸೀಸ್ ಸರಣಿಗೆ ಜಡೇಜಾರನ್ನು ಆಯ್ಕೆ ಮಾಡಲಾಗಿದೆ. 

ಆದರೆ ರವೀಂದ್ರ ಜಡೇಜಾರ ಆಯ್ಕೆ ಏಕದಿನ ಪಂದ್ಯಗಳಿಗೆ ಮಾತ್ರ ಸೀಮಿತವಾಗಿರಲಿದೆ. ಟಿ-20 ಪಂದ್ಯಗಳಿಗೆ ಪಾಂಡ್ಯಾ ಬದಲಿಗೆ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಲ್ಲ. ಪ್ರವಾಸಿ ಆಸೀಸ್ ವಿರುದ್ಧದ ಮೊದಲ ಟಿ-20 ಸರಣಿ ಫೆಬ್ರವರಿ 24 ರಂದು ರವಿವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next