Advertisement

ಮದುವೆಗೂ ಮುನ್ನ ಅಪ್ಪನಾಗುತ್ತಿರುವ ಹಾರ್ದಿಕ್‌ ಪಾಂಡ್ಯ

08:46 PM May 31, 2020 | sudhir |

ಮುಂಬಯಿ: ಭಾರತೀಯ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಇದೀಗ ಮದುವೆಗೂ ಮುನ್ನ ಅಪ್ಪನಾಗುವ ಸಂಭ್ರಮದಲ್ಲಿದ್ದಾರೆ.

Advertisement

ಈ ವಿಚಾರವನ್ನು ಪಾಂಡ್ಯರ ಪ್ರಿಯತಮೆ, ನಟಿ ನತಾಶಾ ಸ್ಟಾಂಕೋವಿಕ್‌ ಅವರೇ ಖುದ್ದು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಫೋಟೋ ಹಾಕಿ ಶುಭಸುದ್ದಿ ಪ್ರಕಟಿಸಿರುವ ನತಾಶಾ, ನಾನು ಮತ್ತು ಹಾರ್ದಿಕ್‌, ಅಪೂರ್ವ ಜೀವನ ಪಯಣದಲ್ಲಿದ್ದು, ಇದರಲ್ಲಿ ಇನ್ನಷ್ಟು ಸಂಭ್ರಮಿಸುವ ಸಮಯ ಬಂದಿದೆ. ನಾವು ಶೀಘ್ರ ನಮ್ಮ ಬದುಕಿನಲ್ಲಿ ಹೊಸಬರೊಬ್ಬರ ಆಗಮನವನ್ನು ಎದುರು ನೋಡುತ್ತಿದ್ದೇವೆ, ಇದಕ್ಕೆ ನಿಮ್ಮ ಹಾರೈಕೆ, ಆಶೀರ್ವಾದಗಳನ್ನು ಕೋರುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ತಾವು ಗರ್ಭಿಣಿಯಾಗಿದ್ದು, ಪಾಂಡ್ಯ ಜತೆಗಿರುವ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ. ನತಾಶಾರ ಈ ಪೋಸ್ಟ್‌ಗೆ ಸುಮಾರು 2 ಲಕ್ಷಕ್ಕೂ ಮಿಕ್ಕಿ ಲೈಕ್ಸ್‌ಗಳು, 2 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ.

ಹಾರ್ದಿಕ್‌ ಅವರ ಪ್ರಿಯತೆಮೆಯಾಗಿರುವ ನತಾಶಾ ಬಾಲಿವುಡ್‌ ನಟಿಯಾಗಿದ್ದು, ಬಿಗ್‌ಬಾಸ್‌ 8 ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು.

2020ರಲ್ಲಿ ಈ ಜೋಡಿ ಉಂಗುರ ಬದಲಿಸಿಕೊಂಡಿತ್ತು. ಹಾರ್ದಿಕ್‌ ಮದುವೆಯಾಗಿರುವುದು ಎಲ್ಲೂ ಬಹಿರಂಗವಾಗಿರಲಿಲ್ಲ. ಆದರೆ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಒಂದು ಬಾರಿ ಇವರು ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next