Advertisement

ಫಿಟ್ ನೆಸ್ ಟೆಸ್ಟ್ ನಲ್ಲಿ ಹಾರ್ದಿಕ್ ವಿಫಲ: ಪಾಂಡ್ಯ ಬದಲು ಸ್ಥಾನ ಪಡೆದ ವಿಜಯ್ ಶಂಕರ್

09:56 AM Jan 13, 2020 | keerthan |

ಮುಂಬೈ: ಮುಂಬರುವ ಕಿವೀಸ್ ಸರಣಿಗೆ ಕಮ್ ಬ್ಯಾಕ್ ಮಾಡುವ ಇರಾದೆಯಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಭಾರಿ ನಿರಾಸೆಯಾಗಿದೆ. ಫಿಟ್ ನೆಸ್ ಟೆಸ್ಟ್ ನಲ್ಲಿ ಪಾಂಡ್ಯ ವಿಫಲನಾದ ಕಾರಣ ಕಿವೀಸ್ ಎ ಸರಣಿಯಿಂದ ಪಾಂಡ್ಯ ಹೊರಬಿದ್ದಿದ್ದಾರೆ.

Advertisement

ಶನಿವಾರ ಮುಂಬೈನಲ್ಲಿ ನಡೆದ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಲ್ಲಿ ಹಾರ್ದಿಕ್ ವಿಫಲರಾಗಿದ್ದಾರೆ. ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಾಂಡ್ಯರನ್ನು ಯಾವುದೇ ರಣಜಿ ಪಂದ್ಯವಾಡಿಸದೇ ನೇರವಾಗಿ ಎ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ಕಿವೀಸ್ ಎ ಸರಣಿಗೆ ಹಾರ್ದಿಕ್ ಬದಲು ತಮಿಳುನಾಡು ಆಲ್ ರೌಂಡರ್ ವಿಜಯ್ ಶಂಕರ್ ರನ್ನು ಆಯ್ಕೆ ಮಾಡಲಾಗಿದೆ.

ಇಂಡಿಯಾ ಎ ತಂಡ ಕಿವೀಸ್ ಎ ವಿರುದ್ಧ ಎರಡು 50 ಓವರ್ ಪಂದ್ಯ, ಮೂರು ಲಿಸ್ಟ್ ಎ ಕ್ರಿಕೆಟ್ ಮತ್ತು ಎರಡು ಟೆಸ್ಟ್ ಗಳು ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next