ಅಹಮದಾಬಾದ್: ಗುಜರಾತ್ ಚುನಾವಣೆಯಲ್ಲಿ ತೀವ್ರ ಕಗ್ಗಂಟಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡು ಗಡೆ ಹಾದಿ ಸುಗಮವಾಗಿದೆ. ಪಟೇಲ್ ಮೀಸಲು ಹೋರಾಟದ ರೂವಾರಿ ಹಾರ್ದಿಕ್ ಪಟೇಲ್ ಮತ್ತು ಕಾಂಗ್ರೆಸ್ ನಡುವೆ ಇದ್ದ ಭಿನ್ನಾಭಿ ಪ್ರಾಯಗಳು ಬಗೆಹರಿದಿದ್ದು, ಸೋಮ ವಾರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ರಾಜ್‌ಕೋಟ್‌ನಲ್ಲಿ ರಾಜಿಸೂತ್ರವನ್ನು ಹಾರ್ದಿಕ್ ಪಟೇಲ್ ಪ್ರಕಟಿಸಲಿದ್ದಾರೆ.
ಪಟೇಲ್ ಮೀಸಲು ಹೋರಾಟ ಸಮಿತಿ ಒತ್ತಾಯಿಸಿದ್ದಂತೆ ಮೀಸಲು ನೀಡುವ ಬಗ್ಗೆ ಸೂತ್ರವನ್ನೂ ಸಿದ್ಧಪಡಿಸಲಾಗಿದೆ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭರತ್ ಸಿನ್ಹ ಸೋಲಂಕಿ ಹೇಳಿದ್ದಾರೆ. ಪಟೇಲರಿಗೆ ಮೀಸಲು ನೀಡು ವುದರ ಜತೆಗೆ ಹಿಂದುಳಿದ ವರ್ಗದವರಿಗೆ ಹಾಲಿ ಇರುವ ಮೀಸಲು ವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಸೂತ್ರದ ಬಗ್ಗೆ ಯಾರೂ ಬಾಯಿ ಬಿಟ್ಟಿಲ್ಲ.
ಮೀಸಲು ಹೋರಾಟ ಸಮಿತಿ ಸಂಚಾಲಕ ದಿನೇಶ್ ಬೊಮ್ಮಾ ನಿಯಾ ಮಾತನಾಡಿ ಕಾಂಗ್ರೆಸ್ ನಡುವಿನ ಮಾತುಕತೆ ತೃಪ್ತಿದಾಯಕವಾಗಿದೆ. ಎಲ್ಲವೂ ಸೋಮವಾರ ಬಹಿರಂಗ ವಾಗಲಿದೆ ಎಂದಿದ್ದಾರೆ. ಇದೇ ವೇಳೆ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಮುಂದಿಟ್ಟ ಬೇಡಿಕೆಗೆ ಕಾಂಗ್ರೆಸ್ ಒಪ್ಪಿದೆಯೋ ಇಲ್ಲವೋ ಎಂದು ಗೊತ್ತಾಗಿಲ್ಲ.
ತನಿಖೆಗೆ ಆದೇಶ
ಗುಜರಾತ್‌ನಾದ್ಯಂತ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಚಲಿತವಾಗಿರುವ ವೀಡಿಯೋ ಬಗ್ಗೆ ತನಿಖೆಗೆ ಚುನಾ ವಣಾ ಆಯೋಗ ಆದೇಶ ನೀಡಿದೆ. ಒಂದು ನಿಮಿಷ ಹದಿನೈದು ಸೆಕೆಂಡ್‌ಗಳ ದೃಶ್ಯಾವಳಿಯಲ್ಲಿ ಧ್ವನಿವರ್ಧಕದಲ್ಲಿ ಮಸೀದಿ ಯಿಂದ ಪ್ರಾರ್ಥನೆಯ ಧ್ವನಿ ಕೇಳುತ್ತಿದ್ದಂತೆಯೇ ಯುವತಿ ಲಗುಬಗೆಯಿಂದ ಓಡಿ ತಾಯಿಯನ್ನು ಅಪ್ಪಿಕೊಳ್ಳುತ್ತಾಳೆ. ಮುಕ್ತಾಯದಲ್ಲಿ “ನಮ್ಮ ಮತ; ನಮ್ಮ ಸುರಕ್ಷೆ’ ಎಂಬ ವಾಕ್ಯ ಮೂಡುತ್ತದೆ. ಅದು ಕೋಮು ಪ್ರಚೋದನಕಾರಿಯಾಗಿದೆ ಎಂದು ನ್ಯಾಯವಾದಿಯೊಬ್ಬರು ಆರೋಪಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.
ಕೇಶುಭಾಯ್ ಜತೆಗೆ ಭೇಟಿ
ಇದೇ ವೇಳೆ ಸಿಎಂ ವಿಜಯ ರುಪಾಣಿ ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿಯ ಹಿರಿಯ ನಾಯಕ ಕೇಶುಭಾಯ್ ಪಟೇಲ್‌ರನ್ನು ಭೇಟಿಯಾಗಿ ಆಶೀ ರ್ವಾದ ಪಡೆದಿದ್ದಾರೆ.