ಯುವ ಕ್ರಿಕೆಟಿಗ ಹಾರ್ಧಿಕ್ ಪಾಂಡ್ಯ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ತಮ್ಮ ನೆಟ್ ಪ್ರಾಕ್ಟೀಸ್ ಸಂಬಂಧಿತ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ನೆಟ್ ನಲ್ಲಿ ಚೆಂಡೊಂದನ್ನು ಹೈ ಹಿಟ್ ಮಾಡಿರುವ ಸ್ಲಫ ಮೋಷನ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಪಾಂಡ್ಯ, ‘ನನ್ನ ಈ ಶಾಟ್ ಗೆ ಸ್ಪೂರ್ತಿ ಯಾರು ಗೊತ್ತಾ’ ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೆ ಹಾರ್ಧಿಕ್ ಇಲ್ಲಿ ಟ್ರೈ ಮಾಡಿರುವುದು ಹಾರ್ಡ್ ಹಿಟ್ಟರ್ ಧೋನಿ ಅವರ ‘ಹೆಲಿಕಾಫ್ಟರ್ ಶಾಟ್’ ಅನ್ನು! ಹೌದು ಯಾರ್ಕರ್ ರೀತಿಯಲ್ಲಿ ಕೆಳಮಟ್ಟದಿಂದ ಬರುವ ಚೆಂಡನ್ನು ಹಾಗೇ ಸಿಕ್ಸರ್ ಕಡೆಗೆ ಎತ್ತುವ ಧೋನಿ ಅವರ ಈ ವಿಶಿಷ್ಟ ಶೈಲಿ ಕ್ರಿಕೆಟ್ ಲೋಕದಲ್ಲಿ ‘ಹೆಲಿಕಾಫ್ಟರ್ ಶಾಟ್’ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಧೋನಿ ಬಿಟ್ಟರೆ ಮತ್ಯಾರಿಗೂ ಈ ಶಾಟ ಅನ್ನು ಸುಲಭವಾಗಿ ಹೊಡೆಯಲಾಗುವುದಿಲ್ಲ ಎನ್ನುವುದೇ ಅಚ್ಚರಿಯ ವಿಚಾರ. ಆದರೆ ಯುವ ಬ್ಯಾಟ್ಸ್ ಮನ್ ಹಾರ್ಧಿಕ್ ಪಾಂಡ್ಯ ಅವರು ನೆಟ್ ನಲ್ಲಿ ಹೆಲಿಕಾಫ್ಟರ್ ಶಾಟ್ ಅನ್ನು ಹೆಚ್ಚೆಚ್ಚು ಅಭ್ಯಾಸ ಮಾಡುತ್ತಿದ್ದಾರೆಂದಾದರೆ ಮುಂದೆ ಮೈದಾನದಲ್ಲೂ ಪಾಂಡ್ಯ ಬ್ಯಾಟಿನಿಂದ ಈ ಸ್ಪೆಷಲ್ ಶಾಟ್ ಅನ್ನು ನಿರೀಕ್ಷಿಸಬಹುದೇ ಎನ್ನುವ ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದಾಗಿದೆ. ಹಾಗಾದ್ರೆ ನೀವೂ ಒಮ್ಮೆ ಪಾಂಡ್ಯ ಅವರ ಈ ಸ್ಪೆಷಲ್ ‘ಹೆಲಿಕಾಫ್ಟರ್ ಶಾಟ್’ ಪ್ರಾಕ್ಟೀಸ್ ಅನ್ನು ನೋಡಿಕೊಂಡು ಬನ್ನಿ.