Advertisement
ಆ “ಚಿನ್ನದ ಹುಡುಗಿ’ ಹಾಸನದ ಕಲ್ಲಹಳ್ಳಿ ಗ್ರಾಮದ ಕೆ.ಎನ್. ಆಶಾ. ಸೋಮವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎಂಎ ಕನ್ನಡದಲ್ಲಿ ಆಶಾ ಎರಡನೇ ಅತಿ ಹೆಚ್ಚು ಅಂದರೆ ಆರು ಚಿನ್ನದ ಪದಕಗಳನ್ನು ಕೊಳ್ಳೆಹೊಡೆದಳು. ಈ ಮೂಲಕ ಉಪ ರಾಷ್ಟ್ರಪತಿಗಳೂ ಸೇರಿದಂತೆ ನೆರೆದವರೆಲ್ಲರ ಮೆಚ್ಚುಗೆಗೆ ಪಾತ್ರಳಾದಳು.
Related Articles
Advertisement
“ಈ ಸಾಧನೆ ಅಪ್ಪನಿಗೆ ಸಹಜವಾಗಿಯೇ ಖುಷಿ ತಂದಿದೆ. ನಾನು ಯಾವುದಾದರೂ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬುದು ಅಪ್ಪನ ಆಸೆ. ನಾನು ಕೆಎಎಸ್ ಮಾಡಬೇಕು ಅಂದುಕೊಂಡಿದ್ದೇನೆ’ ಎಂದ ಅವರು, “ಯಾವುದೇ ಸ್ಕಾಲರ್‌ಶಿಪ್ ಇರಲಿಲ್ಲ. ಹಾಸ್ಟೆಲ್‌ನಲ್ಲಿ ಇದ್ದಾಗ ಮಾಸಿಕ “ಪಾಕೆಟ್ ಮನಿ’ ಅಂತ 750 ರೂ. ಬರುತ್ತಿತ್ತು. ಅದರಲ್ಲಿಯೇ ನನ್ನ ಖರ್ಚು-ವೆಚ್ಚ ನೀಗುತ್ತಿತ್ತು’ ಎಂದು ಹೇಳಿದರು.
ಕೋಲಾರದ ಚಿನ್ನ!: ಅದೇ ರೀತಿ, ಕೆ.ಎಂ. ಶ್ರೀಗುರು ರಾಘವೇಂದ್ರ ಕೋಲಾರದ “ಚಿನ್ನದ ಹುಡುಗ’. ಕೆಲವೇ ವರ್ಷಗಳ ಹಿಂದಿನ ಮಾತು, ಎಸ್ಸೆಸ್ಸೆಲ್ಸಿಯಲ್ಲಿ ಕೇವಲ ಶೇ. 47 ಅಂಕ ಪಡೆದು ಎಲ್ಲರ ಅಪಹಾಸ್ಯಕ್ಕೆ ಒಳಗಾಗಿದ್ದರು. ಸ್ನೇಹಿತರೆಲ್ಲಾ ಗೇಲಿ ಮಾಡುತ್ತಿದ್ದರು. ಇದರಿಂದ ಹಠಕ್ಕೆ ಬಿದ್ದು ಓದಿದ ರಾಘವೇಂದ್ರ, ಪಿಯುಸಿಯಲ್ಲಿ ಶೇ. 85 ಅಂಕ ಗಳಿಸಿದರು.
ಪದವಿಯಲ್ಲಿ ರಾಜ್ಯಕ್ಕೆ ಮೊದಲ 25ನೇ ರ್‍ಯಾಂಕ್‌ನಲ್ಲಿ ಒಬ್ಬರಾದರು. ಈಗ ಎಂಎ ಅರ್ಥಶಾಸ್ತ್ರದಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸಿ ಗಮನಸೆಳೆದರು. ಇವರು ಕೂಡ ಕೃಷಿ ಹಿನ್ನೆಲೆಯಿಂದ ಬಂದವರು. ಏಳು ಜನ ಮಕ್ಕಳಲ್ಲಿ ಕೊನೆಯವರು ರಾಘವೇಂದ್ರ. ಪಿಎಚ್‌ಡಿ ಮಾಡಿ, ಐಎಎಸ್ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಎಸ್ಸೆಸ್ಸೆಲ್ಸಿಯಿಂದ್ಲೂ ಫಸ್ಟ್!: ರಾಯಚೂರು ಜಿಲ್ಲೆ ಸಿಂಧನೂರಿನ ಅನುಷಾ ಯರಮರಸ್, ಎಸ್ಸೆಸ್ಸೆಲ್ಸಿಯಿಂದಲೂ ಊರಿಗೇ ಫಸ್ಟ್. ಈಗ ಎಂಎಸ್ಸಿ ಭೌತಶಾಸ್ತ್ರದಲ್ಲಿ ಐದು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ಎಸ್ಸೆಸ್ಸೆಲ್ಸಿಯಿಂದಲೂ ನಾನು ಶಾಲೆ ಮತ್ತು ಊರಿಗೆ ಮೊದಲ ಸ್ಥಾನದಲ್ಲಿದ್ದೆ.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರಿಂದ ಕಾಲೇಜು ವತಿಯಿಂದ ಚಿನ್ನದ ಪದಕ ನೀಡಿದ್ದರು. ನಂತರ ಬಿಎಸ್ಸಿಯಲ್ಲಿ ಶೇ.97 ಅಂಕ ಗಳಿಸುವ ಮೂಲಕ 3ನೇ ರ್‍ಯಾಂಕ್ ಬಂದಿತು. ಎಂಎಸ್ಸಿ ಭೌತಶಾಸ್ತ್ರದಲ್ಲಿ ಐದು ಚಿನ್ನದ ಪದಕಗಳು ಬಂದಿವೆ. ಎಂಎಸ್ಸಿ ಆಗಿದ್ದರೂ ನಾಗರಿಕ ಸೇವೆ ಮಾಡಬೇಕು ಎಂಬುದು ನನ್ನ ಆಸೆ. ಆದ್ದರಿಂದ ಐಎಎಸ್ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.