Advertisement
ಯಾವ ತಾಲೂಕಿನಲ್ಲಿ ಎಷ್ಟು ಮಳೆ?: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಸೆ.4 ರವರೆಗೂ ಒಟ್ಟು 41.8 ಮಿ.ಮೀ. ಮಳೆ ಆಗಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 27.2 ಮಿ.ಮೀ., ಚಿಂತಾಮಣಿ ತಾಲೂಕಿನಲ್ಲಿ 48.5 ಮಿ.ಮೀ., ಗೌರಿಬಿದನೂರು ತಾಲೂಕಿನಾದ್ಯಂತ 26.5 ಮಿ.ಮೀ., ಗುಡಿಬಂಡೆ ತಾಲೂಕಿನಲ್ಲಿ 25.4 ಮಿ.ಮೀ. ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 29.8 ಮಿ.ಮೀ. ಮಳೆ ದಾಖಲಾಗಿ ಒಟ್ಟಾರೆ ಜಿಲ್ಲಾದ್ಯಂತ 34.5 ಮಿ.ಮೀ. ಮಳೆ ಆಗಿದೆ. ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕಿನಲ್ಲಿ ನಾಲ್ಕು ದಿನಗಳಲ್ಲಿ ಅತಿ ಹೆಚ್ಚು ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಒಟ್ಟು ಸಂಚಿತಮಳೆ ಸೆ.4 ಅಂತ್ಯಕ್ಕೆ ವಾಡಿಕೆ ಮಳೆ 358.9 ಮಿ.ಮೀ. ಮಳೆ ಆಗಬೇಕಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ
340.3 ಮಿ.ಮೀ. ಮಳೆಯಾಗಿದೆ.
ಗುರಿ ಸಾಧಿಸಿ ಶಿಡ್ಲಘಟ್ಟ ಎರಡನೇ ಸ್ಥಾನದಲ್ಲಿದ್ದು, ಬಾಗೇಪಲ್ಲಿ ಶೇ.85, ಚಿಕ್ಕಬಳ್ಳಾಪುರ ಶೇ.82,
ಚಿಂತಾಮಣಿ ಶೇ.80, ಗೌರಿಬಿದನೂರು ಶೇ.81 ಬಿತ್ತನೆಯ ಗುರಿ ಸಾಧಿಸಿದೆ.
Related Articles
ಹೆಕ್ಟೇರ್, ಗುಡಿಬಂಡೆ ತಾಲೂಕಿನಲ್ಲಿ 11,886 ಹೆಕ್ಟೇರ್ ಪೈಕಿ 11,261 ಹೆಕ್ಟೇರ್ ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 17,273 ಹೆಕ್ಟೇರ್ ಪೈಕಿ 16,239 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
Advertisement
ಕೆರೆಕಟ್ಟೆಗೆ ನೀರು: ನಾಲ್ಕೈದು ದಿನಗಳಿಂದ ಬೀಳುತ್ತಿರುವ ಧಾರಾಕಾರ ಮಳೆ ಜೂನ್, ಜುಲೈ ತಿಂಗಳಲ್ಲಿ ಬಿದಿದ್ದರೆ ಉತ್ತಮ ಬಿತ್ತನೆ ಕಾರ್ಯ ನಡೆಯುತ್ತಿತ್ತು. ಈಗಾಗಲೇ ನೆಲಗಡಲೆಗೆ ಬಿತ್ತನೆಗೆ ಅವಧಿ ಮುಗಿದೆ. ಆದ್ದರಿಂದ ಈಗಬೀಳುತ್ತಿರುವ ಮಳೆ ರಾಗಿ, ಮುಸುಕಿನ ಜೋಳ ಹಾಗೂ ಹುರುಳಿ ಬಿತ್ತನೆಗೆ ಅನುಕೂಲವಾಗಲಿದೆ. ಮುಸುಕಿನ ಜೋಳಕ್ಕೆ ಅವಕಾಶ ಇರುವುದರಿಂದ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಸಮಸ್ಯೆ ನಿವಾರಣೆಯಾಗಲಿದೆ. ಕೆರೆ, ಕುಂಟೆಗಳಿಗೆ ನೀರು ಹರಿದು ಬಂದಿರುವುದರಿಂದ ಕುಡಿವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಲಿದೆ
ಎನ್ನುತ್ತಾರೆ ಅಣಕನೂರು ರೈತ ಬಚ್ಚನ್ನ.