Advertisement

ಐಪಿಎಲ್ ಪ್ರದರ್ಶನದ ಮೂಲಕ ಮತ್ತೆ ಟೀಂ ಇಂಡಿಯಾ ಎಂಟ್ರಿ ನೀಡುವೆ

11:18 AM May 26, 2020 | keerthan |

ಮುಂಬೈ: ನಾನಿನ್ನೂ ಫಿಟ್ ಆಗಿದ್ದು, ಟೀಂ ಇಂಡಿಯಾ ಪರವಾಗಿ ಅಂತಾರಾಷ್ಟ್ರೀಯ ಪಂದ್ಯವಾಡಲು ಇನ್ನೂ ಸಿದ್ದವಿರುವುದಾಗಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

Advertisement

ನನ್ನ ಐಪಿಎಲ್ ಪ್ರದರ್ಶನವನ್ನೇ ನೋಡಿ. ಐಪಿಎಲ್ ನ ಸಣ್ಣ ಮೈದಾನದಲ್ಲಿ ಟಿ20 ಕ್ರಿಕೆಟ್ ದಿಗ್ಗಜರ ನಡುವೆ ನಾನು ಉತ್ತಮ ಬೌಲಿಂಗ್ ನಡೆಸುತ್ತೇನೆ. ಹಾಗಾದರೆ ನನಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಬೌಲಿಂಗ್ ನಡೆಸಬಹುದು ಎಂದು ಭಜ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಹರ್ಭಜನ್ ಸಿಂಗ್ ಧೋನಿ ಪಾಳಯದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.

ಐಪಿಎಲ್ ನಲ್ಲಿ ವಿಶ್ವ ದರ್ಜೆಯ ಆಟಗಾರರ ಎದುರು ಬೌಲಿಂಗ್ ಮಾಡುತ್ತೇನೆ. ಪವರ್ ಪ್ಲೇ ಮತ್ತು ಮಿಡಲ್ ಆರ್ಡರ್ ನಲ್ಲಿ ಬೌಲಿಂಗ್ ನಡೆಸುತ್ತೇನೆ. ಮತ್ತು ಸಾಕಷ್ಟು ವಿಕೆಟ್ ಪಡೆದಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next