ನವದೆಹಲಿ: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ, ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹರ್ಬನ್ಸ್ ಕಪೂರ್ (75ವರ್ಷ) ಸೋಮವಾರ (ಡಿಸೆಂಬರ್ 13) ಡೆಹ್ರಾಡೂನ್ ನಿವಾಸದಲ್ಲಿ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯಿದೆ ತಂದು ದೇಶ ವಿಭಜನೆ ಮಾಡಬೇಡಿ: ಕೆ.ಜೆ.ಚಾರ್ಜ್
ಹರ್ಬನ್ಸ್ ಕಪೂರ್ ಉತ್ತರಾಖಂಡ್ ವಿಧಾನಸಭೆಯ ಮಾಜಿ ಸ್ಪೀಕರ್. ಪಕ್ಷದ ಹಿರಿಯ ಮುಖಂಡ ಕಪೂರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ಮುಖಂಡ, ಮಾಜಿ ಶಾಸಕ ಕಪೂರ್ ಅವರು ತಮ್ಮ ಸಾರ್ವಜನಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುವುದಾಗಿ ಪ್ರಧಾನಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಪೂರ್ ಅವರ ನಿವಾಸಕ್ಕೆ ತೆರಳಿ, ಅಂತಿಮ ಗೌರವ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಹರ್ಬನ್ಸ್ ಕಪೂರ್ ಅವರು ನಿಧನರಾದ ಸುದ್ದಿ ತಿಳಿಯಿತು. ಇದೊಂದು ನೋವಿನ ಸಂಗತಿ. ಅವರು ತುಂಬಾ ಸರಳವಾಗಿ ಬದುಕಿದ್ದರು ಎಂದು ಪುಷ್ಕರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.