ನವದೆಹಲಿ: ಗಾಜಿಯಾಬಾದ್ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ಉತ್ತರಪ್ರದೇಶ ಪೊಲೀಸರು ನೀಡಿದ್ದ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ(ಜುಲೈ 23) ರದ್ದುಪಡಿಸಿದೆ.
ಇದನ್ನೂ ಓದಿ:ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ : ಸಚಿವ ಸುಧಾಕರ್
ಉತ್ತರಪ್ರದೇಶ ಪೊಲೀಸರು ಮಹೇಶ್ವರಿ ಅವರಿಗೆ ನೀಡಿದ ನೋಟಿಸ್ ನಲ್ಲಿ ಗಲಭೆ ಉದ್ದೇಶ ಮತ್ತು ಕ್ರಿಮಿನಲ್ ಪಿತೂರಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವುದಾಗಿ ಆರೋಪಿಸಿರುವ ಬಗ್ಗೆ ಹೈಕೋರ್ಟ್ ಕಟುವಾಗಿ ಟೀಕಿಸಿದೆ.
ಪ್ರಾಥಮಿಕ ನೋಟಿಸ್ ಗೆ ಮಹೇಶ್ವರಿ ಅವರು ಪ್ರತಿಕ್ರಿಯೆ ನೀಡದಿದ್ದ ನಂತರ ಯುಪಿ ಪೊಲೀಸರು ಸೆಕ್ಷನ್ 41ಎ ಅನ್ನು ಪ್ರಯೋಗಿಸಿದ್ದಾರೆ. ಆದರೆ ಈ ಸೆಕ್ಷನ್ ಕಿರುಕುಳದ ಸಾಧನವನ್ನಾಗಿ ಮಾಡಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ ಕೋರ್ಟ್, ಉತ್ತರಪ್ರದೇಶ ಪೊಲೀಸರ ನೋಟಿಸ್ ಅನ್ನು ರದ್ದುಪಡಿಸಿದೆ. ಅಲ್ಲದೇ ಒಂದು ವೇಳೆ ಪ್ರಶ್ನಿಸುವ ಅಗತ್ಯವಿದ್ದರೆ ವರ್ಚುವಲ್ ಆಗಿ ಪೊಲೀಸರು ಪ್ರಶ್ನಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಕಳೆದ ಕೆಲವು ದಿನಗಳಿಂದ ವಿಚಾರಣೆ ನಡೆಯುತ್ತಿದ್ದರೂ ಕೂಡಾ ಘಟನೆಯಲ್ಲಿ ಟ್ವಿಟರ್ ಇಂಡಿಯಾ ಅಧಿಕಾರಿಯ ಪಾಲ್ಗೊಳ್ಳುವಿಕೆಯನ್ನು ದೃಢೀಕರಿಸುವ ಯಾವುದೇ ಪುರವಾವೆಯನ್ನು ಗಾಜಿಯಾಬಾದ್ ಪೊಲೀಸರು ಪ್ರದರ್ಶಿಸಿಲ್ಲ ಎಂದು ಜಸ್ಟೀಸ್ ಜಿ.ನರೇಂದ್ರ ಹೇಳಿದ್ದಾರೆ.