ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಜಿಪಂನ ಜೆಡಿಎಸ್ ಸದಸ್ಯರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮಾನಸಿಕ ವಾಗಿ ಹಿಂಸೆ ನೀಡುತ್ತಲೇ ಬಂದಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಬಿ.ಎಸ್.ಶ್ವೇತಾ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಪಂ ಸಾಮಾನ್ಯ ಸಭೆಗಳಿಗೆ ಜೆಡಿಎಸ್ ಸದಸ್ಯರು ಗೈರು ಹಾಜರಾಗಿ ಕೋರಂ ಕೊರತೆ ಸೃಷ್ಟಿಸುತ್ತಾರೆ.
ಕೊರೊನಾ ಹರಡುತ್ತಿರು ವುದರಿಂದ ಸಾಮಾನ್ಯ ಸಭೆ ಕರೆಯದಿರವುದನ್ನೇ ವಿವಾದವುಂಟು ಮಾಡಿ ಸಾಮಾನ್ಯ ಸಭೆ ಕರೆಯುತ್ತಿಲ್ಲ ಎಂದು ಆರೋಪಿಸುತ್ತಾರೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಯಾವುದೇ ಆಧಾರಗಳಿಲ್ಲದೆ ಜಿಪಂಯಲ್ಲಿ ಅಧ್ಯಕ್ಷರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಿದ್ದಾರೆ ಎಂದರು. ಪ್ರಭಾವಿ ರಾಜಕಾರಣಿಯಾಗಿರುವ ಅವರು ತಾನು ಹೇಳಿದಂತೆಯೇ ಜಿಪಂಯಲ್ಲಿ ಎಲ್ಲ ನಡೆಯಬೇಕು ಎಂದು ಜೆಡಿಎಸ್ ಸದಸ್ಯರನ್ನು ಬಳಸಿಕೊಂಡು ಸಭೆ ಗಳು ನಡೆಯದಂತೆ ಮಾಡಿ ತೊಂದರೆ ಕೊಡುತ್ತಿದ್ದಾರೆ.
ನನ್ನನ್ನು ಬ್ಲಾಕ್‌ವೆುಲ್ ಮಾಡುವ ಪ್ರಯತ್ನವನ್ನು ಜೆಡಿಎಸ್‌ನವರು ಮಾಡುತ್ತಿರಬಹುದು. ಆದರೆ ನಾನು ಯಾರ ಕೈಗೊಂಬೆಯಾಗಿರಲಾರೆ ಎಂದು ಸ್ಪಷ್ಟಪಡಿಸಿದರು. ಜಿಪಂ ಅಧ್ಯಕ್ಷರ ವಿವೇಚನಾ ಕೋಟಾದ ಒಂದು ಕೋಟಿ ರೂ. ಅನುದಾನದಲ್ಲಿ ಜೆಡಿಎಸ್ ಸದಸ್ಯರ ಕ್ಷೇತ್ರಗಳಿಗೂ ಅನು ದಾನ ಹಂಚಿದ್ದೇನೆ. ಆದರೆ ಜೆಡಿಎಸ್ ಸದಸ್ಯರು ಅಧ್ಯಕ್ಷರಿಗೆ ಕಾಮಗಾರಿಗಳ ಪಟ್ಟಿ ಕೊಡಕೂಡದು ಎಂದು ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಸದಸ್ಯರಿಗೆ ತಾಕೀತು ಮಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದೇನೆ. ತನ್ನ ಮೇಲೆ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ. ಹಾಗಾಗಿ ಈಗ ಜಿಪಂ ಕಚೇರಿ ಕಟ್ಟಡದ ಲಿಫ್ಟ್ ಅಳವಡಿಕೆ ಹಾಗೂ ಅಧ್ಯಕ್ಷರು ವೇತನ ಭತ್ಯೆಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಈಗ ದೂರುತ್ತಿದ್ದಾರೆ. ನಾನು ತಪ್ಪು ಮಾಡಿದ್ದರೆ ತನಿಖೆ ನಡೆಸಲಿ.
ಸಾಬೀತಾದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಜೊತೆಗೆ ಸದಸ್ಯತ್ವಕ್ಕೂ ರಾಜೀನಾಮೆ ಕೊಡುವೆ. ಆನಂತರ ರೇವಣ್ಣ ಅವರು ತಮ್ಮ ಪತ್ನಿ ಭವಾನಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ ಎಂದು ಶ್ವೇತಾ ಅವರು ವ್ಯಂಗ್ಯವಾಡಿದರು.