Advertisement

ಕಿರುಕುಳ: ಬಾಕ್ಸರ್‌ ಲವ್ಲಿನಾ ಬೋರ್ಗೊಹೇನ್‌ ಆರೋಪ

12:02 AM Jul 26, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ ಆರಂಭಕ್ಕೆ ಇನ್ನು ಮೂರೇ ದಿನ. ಅಷ್ಟರಲ್ಲಿ ಬಾಕ್ಸರ್‌ ಲವ್ಲಿನಾ ಬೋರ್ಗೊಹೇನ್‌ ಮಾಡಿರುವ ಟ್ವೀಟ್‌ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ತನಗೆ ಅಧಿ ಕಾರಿಗಳಿಂದ ಕಿರುಕುಳವಾಗುತ್ತಿದೆ, ತನ್ನ ಕೋಚ್‌ಗಳಿಗೆ ಕ್ರೀಡಾಗ್ರಾಮಕ್ಕೆ ಪ್ರವೇಶ ನೀಡುತ್ತಿಲ್ಲ.

Advertisement

ಹೀಗಾದರೆ ತಾನು ಸಿದ್ಧತೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದರ ಮೂಲಕ ತನ್ನನ್ನು ಅಧಿಕಾರಿವರ್ಗ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವಾಲಯ, ಲವ್ಲಿನಾ ಕೋಚ್‌ಗೆ ಪ್ರವೇಶ ನೀಡುವುದಕ್ಕೆ ಕೂಡಲೇ ವ್ಯವಸ್ಥೆ ಮಾಡಿ ಎಂದು ನಾವು ಐಒಎಗೆ ತಿಳಿಸಿದ್ದೇವೆ ಎಂದು ಹೇಳಿದೆ.

ಇತ್ತೀಚಿನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಕಳಪೆಯಾಟಕ್ಕೂ ಇಂತಹ ಕಿರಿಕಿರಿಗಳೇ ಕಾರಣ ಎಂದು ಅಸ್ಸಾಂ ಬಾಕ್ಸರ್‌ ಲವ್ಲಿನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next