Advertisement
ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಉಚ್ಚೆಂಗೆಮ್ಮದೇವಿ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕೇವಲ 68 ದಿನಗಳಲ್ಲಿ 21,49,110 ರೂ. ಸಂಗ್ರಹವಾಗಿದೆ. ಈ ಹಣವನ್ನು ಹರಪನಹಳ್ಳಿಯ ಎಸ್‌ಬಿಎಂ ಬ್ಯಾಂಕ್‌ನ ದೇವಸ್ಥಾನದ ಖಾತೆಗೆ ಜಮಾ ಮಾಡಲಾಯಿತು. ಕಳೆದ 25 ಮಾರ್ಚ್ 2019ರಂದು ಹುಂಡಿ ಎಣಿಕೆ ಮಾಡಲಾಗಿದ್ದ ಸಮಯದಲ್ಲಿ 15,70,509 ಲಕ್ಷ ರೂ. ಸಂಗ್ರಹವಾಗಿತ್ತು ಎಂದು ಉತ್ಸವಾಂಭ ದೇವಸ್ಥಾನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ ತಿಳಿಸಿದ್ದಾರೆ.
ಕಾಣಿಕೆ ಹುಂಡಿಯಲ್ಲಿ ದೇವಿಗೆ ವಿವಿಧ ಭಕ್ತರು ಪತ್ರ ಬರೆದು ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದಾರೆ. ಹುಂಡಿ ಎಣಿಕೆ ಸಮಯದಲ್ಲಿ ಪತ್ರಗಳು ಲಭ್ಯವಾಗಿವೆ. ಅಕ್ಕನ ಗಂಡನಿಗೆ ಜ್ವರ ಬಂದಿದ್ದು, ಬೇಗ ಗುಣಮುಖ ಮಾಡಿ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡುವಂತೆ ಮತ್ತು ತಾಯಿಗೆ ಬೇಗ ಹುಷಾರು ಮಾಡುವಂತೆ ಒಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ. ಮತ್ತೂಂದು ಪತ್ರದಲ್ಲಿ ಮನೆ ಬಿಟ್ಟು ಕೊಡುವಂತೆ, ಸಾಲಗಾರರು ಗಂಡನಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದಂತೆ ಕಾಪಾಡಬೇಕೆಂದು ಬೇಡಿಕೊಂಡಿದ್ದಾರೆ. ನನ್ನ ಮತ್ತು ನನ್ನ ಅಣ್ಣನನ್ನು ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಪಾಸ್ ಮಾಡಬೇಕು, ಓದುವುದಕ್ಕೆ, ಬರಿಯಲಿಕ್ಕೆ ತೊಂದರೆಯಬಾರದು, ಮನೆಯಲ್ಲಿರುವ ಜಗಳ, ತೊಂದರೆ ದೂರವಾಗಲಿ, ಮನೆಯಲ್ಲಿರುವವ ಎಲ್ಲರೂ ಕ್ಷೇಮವಾಗಿರಲಿ, ನನಗೆ ಪೊಲೀಸ್ ಕೆಲಸ ಸಿಗಲಿ. ಎಲ್ಲರನ್ನು ಚೆನ್ನಾಗಿರಲಿ ಎಂದು ಮತ್ತೂಬ್ಬ ಭಕ್ತ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ