Advertisement

ಕ್ವಾರಂಟೈನ್‌ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿ

05:16 PM Jun 22, 2020 | Team Udayavani |

ಹರಪನಹಳ್ಳಿ: ತಾಲೂಕು ಚಿಗಟೇರಿ ಹೋಬಳಿ ನಜೀರನಗರದ ಹತ್ತಿರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಇನ್‌ ಸ್ಟಿಟ್ಯೂಷನ್‌ ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳೀಯ ಸಿವಿಲ್‌ ಹಿರಿಯ ಶ್ರೇಣಿ ನ್ಯಾಯಾಧೀಶೆ ಮಂಜುಳಾ ಉಂಡಿ ಶಿವಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ಕೋವಿಡ್ ಪಾಸಿಟಿವ್‌ ಪ್ರಾಥಮಿಕ ಸಂಪರ್ಕ ವ್ಯಕ್ತಿಯಲ್ಲಿದ್ದ ವ್ಯಕ್ತಿಗಳಿಂದ ತಿಂಡಿ, ಊಟ ಸೇರಿದಂತೆ ಇತರೆ ಸೌಕರ್ಯಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆಯಾ ಎನ್ನುವ ಬಗ್ಗೆ ನ್ಯಾಯಾಧಿಧೀಶರು ಮಾಹಿತಿ ಪಡೆದುಕೊಂಡರು. ಕ್ವಾರಂಟೈನ್‌ ಕೇಂದ್ರದಲ್ಲಿರುವ ವ್ಯಕ್ತಿಗಳು ಇಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ, ಆದರೆ ನಮ್ಮ ಊರಿನ ಮನೆಯಲ್ಲಿರುವ ದನಕರುಗಳಿಗೆ ಕುಡಿಯುವ ನೀರು, ಮೇವಿನ ತೊಂದರೆ ಉಂಟಾಗಿದ್ದು, ಜಾನುವಾರುಗಳನ್ನು ನೋಡಿಕೊಳ್ಳುವವರು ಯಾರು ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸಿದ ನ್ಯಾಯಾಧೀಶರು ಎಲ್ಲಾ ಕಡೆ ಇದೆ ರೀತಿ ಸ್ಥಳೀಯರು ವಿರೋಧ ಮಾಡಿದಲ್ಲಿ ಕೋವಿಡ್ ಶಂಕಿತರನ್ನು ಎಲ್ಲಿ ಕ್ವಾರಂಟೈನ್‌ ಮಾಡುವುದು? ಅದು ಸರಿ ಅಲ್ಲ, ಸಾರ್ವಜನಿಕರು ಸಹ ಸಂದರ್ಭವನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳಿಗೆ, ಕೊರೊನಾ ವಾರಿಯರ್ಸ್‌ಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಜಾನುವಾರುಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಪಂ ಪಿಡಿಒಗೆ ತಿಳಿಸಿ ನೀರು, ಮೇವಿನ ವ್ಯವಸ್ಥೆ ಮಾಡಲಾಗುವುದು. ಮೊದಲು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇಲ್ಲಿ ಏನಾದರೂ ತೊಂದರೆ ಆದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದು ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್‌ ಹೇಳಿದರು. ಚಿಗಟೇರಿ ಠಾಣೆ ಪಿಎಸ್‌ಐ ಮುಹಮ್ಮದ್‌ ಇಸಾಕ್‌, ಮುರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಡಿ.ಷಣ್ಮುಖಪ್ಪ, ವಾರ್ಡನ್‌ ಪರಷು ನಾಯ್ಕ, ಆರ್‌.ಐ ಬಸವರಾಜ್‌, ವಿಶ್ವನಾಥ್‌, ಕುಮಾರ್‌, ಪೊಲೀಸ್‌ ಮತ್ತು ನ್ಯಾಯಾಲಯ ಹಾಗೂ ಶಾಲೆ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next