Advertisement

ವಕೀಲರು ಸಂವಿಧಾನ ಕಾಯುವ ರಕ್ಷಕರು

06:10 PM Dec 04, 2019 | Naveen |

ಹರಪನಹಳ್ಳಿ; ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಪ್ರಮಖವಾಗಿದ್ದು, ಬಹಳಷ್ಟು ಮಂದಿ ಸಾಮಾಜಿಕ ಕಳಕಳಿ ಹೊಂದಿದ್ದರು ಎಂದು ವಕೀಲ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್‌ ಹೇಳಿದರು.

Advertisement

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ವಕೀಲರ ಸಂಘದಿಂದ ಏರ್ಪಡಿಸಲಾಗಿದ್ದ ವಕೀಲರ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಸಮಾಜದ ಏಳಿಗೆಗಾಗಿ ಶ್ರಮಿಸುವವರಲ್ಲಿ ವಕೀಲರ ಪಾತ್ರ ದೊಡ್ಡದಿದೆ. ಎಲ್ಲ ರೀತಿಯ ವಿಷಯಗಳನ್ನು ವಕೀಲ ವೃತ್ತಿಯಲ್ಲಿ ಮಾತ್ರ ತಿಳಿದುಕೊಳ್ಳುವದಕ್ಕೆ ಸಾಧ್ಯವಾಗುತ್ತೆ ಎಂದರು.

ಹಿರಿಯ ವಕೀಲ ಆರುಂಡಿ ನಾಗರಾಜ್‌ ಮಾತನಾಡಿ, ಮಾಜಿ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್‌ ಅವರ ನೆನಪಿನಲ್ಲಿ ಆಚರಿಸುವ ವಕೀಲರ ದಿನಾಚರಣೆ ತನ್ನದೇಯಾದ ಮಹತ್ವ ಹೊಂದಿದೆ. ವಕೀಲರು ಸಮಾಜದ ಶಕ್ತಿಯಾಗಿದ್ದಾರೆ ಎಂದರು.

ಅಪರ ಸರ್ಕಾರಿ ವಕೀಲ ಕಣವಿಹಳ್ಳಿ ಮಂಜುನಾಥ್‌ ಮಾತನಾಡಿ, ವಕೀಲರುಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಉತ್ಸುಕತನ ಇರಬೇಕು. ವಕೀಲರು ಸಂವಿಧಾನವನ್ನು ಕಾಯುವ ರಕ್ಷಕರು ಎಂದು ಹೇಳಿದರು. ವಕೀಲ ಸಂಘದ ಕಾರ್ಯದರ್ಶಿ ವೇದಮೂರ್ತಿ, ವಕೀಲರಾದ ಗೋಣಿಬಸಪ್ಪ, ಟಿ.ವೆಂಕಟೇಶ್‌, ಚಂದ್ರಮುಳಿ, ಸಿ.ರಾಮಭಟ್‌, ಪ್ರಕಾಶ್‌, ಚಂದ್ರೇಗೌಡ, ಮƒತಂಜಯ್ಯ, ಜಾಕೀರ್‌, ರೇವಣಸಿದ್ದಪ್ಪ, ಪ್ರಸಾದ್‌ ದೊಡ್ಡಮನಿ, ಬಿ.ತಿರುಪತಿ, ಸಿದ್ದೇಶ್‌, ಮಂಜುನಾಥ್‌, ಪ್ರಸಾದನಾಯ್ಕ, ವಾಮದೇವ್‌, ಎಸ್‌.ಜಿ.ತಿಪ್ಪೇಸ್ವಾಮಿ, ಮಂಜ್ಯಾನಾಯ್ಕ, ಕೆ.ಎಂ. ರವಿಶಂಕರ್‌, ವೈ.ಟಿ.ಕೊಟ್ರೇಶ್‌, ಬಿ.ಹಾಲೇಶ್‌, ಸಿ.ಹಾಲೇಶ್‌, ಪ್ರವೀಣ್‌, ಸಿದ್ದೇಶ್‌, ಹನುಮಂತಪ್ಪ, ಗುಡದಯ್ಯ, ತಿಪ್ಪೇಶ್‌, ಜಿ.ಹಾಲೇಶ್‌, ವೈ. ಬಸವರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next