Advertisement

ಪ್ರಜಾಪ್ರಭುತ್ವದಲ್ಲಿ ಕಾರ್ಮಿಕರ ಪಾತ್ರ ಹಿರಿದು

05:57 PM May 02, 2020 | Naveen |

ಹರಪನಹಳ್ಳಿ: ಪ್ರಜಾಪ್ರಭುತ್ವ ದೇಶದಲ್ಲಿ ಕಾರ್ಮಿಕರ ಪಾತ್ರ ಹಿರಿದಾಗಿದ್ದು, ಅವರ ಬೆವರಿನ ಪ್ರತಿಫಲದಿಂದ ದೇಶ ಅಭಿವೃದ್ಧಿ ಪಥದತ್ತ ದಾಪುಗಾಲು ಆಗುತ್ತದೆ. ಕಾರ್ಮಿಕರು ದೇಶದ ನಿಜವಾದ ಆಸ್ತಿ ಎಂದು ತಾಪಂ ಇಒ ಅನಂತರಾಜ್‌ ಹೇಳಿದರು.

Advertisement

ತಾಲೂಕಿನ ಹೊಸಕೋಟೆ ಗ್ರಾಪಂ ವ್ಯಾಪ್ತಿಯ ದೊಡ್ಡಹಳ್ಳದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಕೆಲಸವನ್ನು ಯಂತ್ರಗಳ ಬಳಕೆಗೆ ಅವಕಾಶ ನೀಡದೆ ದುಡಿಯುವ ಕೈಗೆ ಒದಗಿಸಲಾಗಿದ್ದು, ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. ಕೂಲಿ ಕಾರ್ಮಿಕರು ಕೆಲಸದ ವೇಳೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.

ಕಾರ್ಮಿಕ ಮುಖಂಡ ಗುಡಿಹಳ್ಳಿ ಹಾಲೇಶ್‌ ಮಾತನಾಡಿ, ಸರ್ಕಾರ ಕಾರ್ಮಿಕರ ವಿರೋಧಿ ನೀತಿಗಳನ್ನು ಕೈ ಬಿಡಬೇಕು. ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಕೂಲಿ ಕಾರ್ಮಿಕರ ಖಾತೆಗೆ 2 ಸಾವಿರ ಸಹಾಯ ಧನವನ್ನು ತಕ್ಷಣವೇ ಜಮಾ ಮಾಡಬೇಕು. ಕಾರ್ಮಿಕರ ಜೀವನ ಭದ್ರತೆಗೆ ಗೃಹಸಾಲ, ವಿವಾಹ ಪ್ರೋತ್ಸಾಹ ಧನ, ಆರೋಗ್ಯ, ಅಪಘಾತ, ವಿಮೆ ಹೆಚ್ಚಳ ಮಾಡಬೇಕು
ಎಂದು ಒತ್ತಾಯಿಸಿದರು. ಇದೇ ವೇಳೆ ಮಾದಿಹಳ್ಳಿ ಗ್ರಾಮದ ಹಿರಿಯ ಕಟ್ಟಡ ಕಾರ್ಮಿಕ ಸೈಫುಲ್ಲಾ ಸಾಹೇಬ್‌ ಅವರನ್ನು ಸನ್ಮಾನಿಸಲಾಯಿತು. ನಂತರ ಕೂಲಿ ಕಾರ್ಮಿಕರಿಗೆ ಸಿಹಿ ವಿತರಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ಎಲ್‌.ತಿಮ್ಮಾನಾಯ್ಕ, ಹೊಸಕೋಟೆ ಗ್ರಾಪಂ ಪಿಡಿಒ ಸಂಗಪ್ಪ, ಪರಮೇಶ್ವರಪ್ಪ, ಅಧ್ಯಕ್ಷೆ ಪಾರ್ವತಮ್ಮ, ನಿಂಗಪ್ಪ, ಹಾಲಪ್ಪ, ಕಾರ್ಮಿಕ ಸಂಘಟನೆಯ ಭಾಗ್ಯಮ್ಮ, ಶ್ರುತಿ, ಶಿವಕುಮಾರ್‌, ನಾಗರಾಜ್‌, ಶಿಲ್ಪ, ಮಲ್ಲೇಶ್‌, ದಂಡ್ಯಪ್ಪ, ಮಂಜುನಾಥ್‌, ಪ್ರಗತಿಪರ ಹೊರಾಟಗಾರ ಮಾದಿಹಳ್ಳಿ ಮಂಜಪ್ಪ, ಮಲ್ಲಿಕಾರ್ಜುನ್‌,
ಬಸವರಾಜ್‌, ನಿಂಗಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next