Advertisement

ಬೇಡಿಕೆ ಈಡೇರದಿದ್ದರೆ ಮೌಲ್ಯಮಾಪನ ಬಹಿಷ್ಕಾರ

05:00 PM Dec 09, 2019 | Team Udayavani |

ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು ಸಿದ್ಧರಾಗಿರಬೇಕೆಂದು ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಕರೆ ನೀಡಿದರು.

Advertisement

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ತಾಲೂಕು ಘಟಕದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚಿನ ಸಂಬಳಕ್ಕಾಗಿ ಬೇಡಿಕೆಯನ್ನಿಟ್ಟರೆ ಅದನ್ನು ಈಡೇರಿಸದೆ ಮುಖ್ಯಮಂತ್ರಿಗಳು ಉಪನ್ಯಾಸಕರನ್ನು ವೈರಿಗಳಂತೆ ಕಾಣುತ್ತಿದ್ದಾರೆ. ಅಲ್ಲದೇ ಉನ್ನತ ಅಧಿ ಕಾರಿಗಳು ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ. ಪರೀಕ್ಷೆಯ ಎಲ್ಲ ಕರ್ತವ್ಯ ನಿಭಾಯಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿರುವ ನಮ್ಮ ಬೇಡಿಕೆಗಳು ಈಡೇರುವವರೆಗೂ ಮೌಲ್ಯ ಮಾಪನವನ್ನು ಬಹಿಸ್ಕರಿಸಬೇಕು. 24 ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆಗಳನ್ನಾದರೂ ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ರಾಜ್ಯದಲ್ಲಿ ಶಿಕ್ಷಣ ಇಲಾಖೆ ಅಧೋಗತಿಯಲ್ಲಿವೆ. ಮೇಲಾಧಿಕಾರಿಗಳ ಪ್ರತಿಷ್ಠೆಯಲ್ಲಿ ಮಕ್ಕಳು ಬಲಿಯಾಗುತ್ತಿದ್ದಾರೆ. ಅವರ ಧೋರಣೆ ಇದೇ ರೀತಿ ಮುಂದುವರೆ ಮಕ್ಕಳು ಶಾಪ ತಟ್ಟಲಿದೆ ಎಂದ ಅವರು ರಾಜ್ಯದಲ್ಲಿ 3900 ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದರೂ ಸಹ ಭರ್ತಿ ಮಾಡದೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಅತಿಥಿ ಉಪನ್ಯಾಸಕರನ್ನು ತೆಗೆದುಕೊಂಡು ತರಗತಿಗಳನ್ನು ನಡೆಸಲು ಸೂಚಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪನ್ಯಾಸ ನೀಡಿದ ವಿಜ್ಞಾನ ಲೇಖಕ ಎಂ.ಆರ್‌ .ನಾಗರಾಜ್‌ ಅವರು, ಇಂದು ಪೋಷಕರು 15 ಸಾವಿರರೂ. ಮೊಬೈಲ್‌ ಕೊಡಿಸುತ್ತಾರೆ. ಆದರೆ 50 ರೂಪಾಯಿಯ ಪುಸ್ತಕ ಕೊಡಿಸುವುದಿಲ್ಲ. ವಂಡರ್‌ ಫುಲ್‌ ಮತ್ತು ಲರ್ನ್ ಶಬ್ಧದ ಅರ್ಥ ವಿವರಣೆಯನ್ನು ಶಿಕ್ಷಣಕ್ಕೆ ಸಂಬಂಧಿಸಿದಂತೆ ಆರ್ಥವಾಗಿ ವಿವರಿಸಿದ ಅವರು ಮಗುವಿಗೆ ಅರ್ಥವಾಗದ ಪಾಠ ಕ್ಯಾನ್ಸ್‌ರ್‌ ಇದ್ದಂತೆ, ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಬೇಕು ಎಂದರು.

Advertisement

ಬಳ್ಳಾರಿ ಪ.ಪೂ. ಕಾಲೇಜು ಉಪನಿರ್ದೇಶಕ ಬಿ.ಆರ್‌.ನಾಗರಾಜಪ್ಪ ಮಾತನಾಡಿ, ಪಾಠಗಳಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಉಪನ್ಯಾಸಕರಿಗೆ ತಿಳಿಸಿದ ಅವರು ಹರಪನಹಳ್ಳಿ ಫಲಿತಾಂಶ ಉತ್ತಮವಾಗಿದೆ ಎಂದರು. ನಿವೃತ್ತ ಉಪ ನಿರ್ದೇಶಕ ಶೇಖರಪ್ಪ ಮಾತನಾಡಿ, ಕಷ್ಟಪಟ್ಟು ಕೆಲಸ ಮಾಡಿ ನಾವು ಶಿಸ್ತುಬದ್ಧ ವ್ಯಕ್ತಿಗಳಾಗಬೇಕು ಎಂದರು.

ಬಳ್ಳಾರಿ ಜಿಲ್ಲಾಧ್ಯಕ್ಷ ಡಾ| ರಾಜಣ್ಣ ಎಂ.ಡಾ. ಭೀಮಪ್ಪ ಮಾತನಾಡಿದರು. ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್‌. ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಉಪನ್ಯಾಸಕರಾದ ಆರ್‌. ಚನ್ನಬಸವನಗೌಡ, ರವೀಂದ್ರಯ್ಯ, ಯಶೋಧಬಾಯಿ ಜೆ. ಗಂಗಾಧರ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ತಾಲೂಕಿನಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪ್ರಾಚಾರ್ಯರಾದ ಎಲ್‌.ಕೃಷ್ಣಾಸಿಂಗ್‌, ಟಿ. ಹಾಲೇಶ್‌, ಶ್ರೀಕಂಠಮೂರ್ತಿ, ಕೆ.ನೀಲಮ್ಮ, ಎ.ಆರ್‌.ಛಾಯಾಕುಮಾರಿ, ಆರ್‌.ಶಿವಾನಂದ, ಕುಡುಪಲಿ, ಆರ್‌.ಎಚ್‌. ಕಲ್ಯಾಣದವರ್‌, ಚೌಡಪ್ಪ. ಕೆ.ಚನ್ನಬಸಪ್ಪ.ಜಿ, ಎಚ್‌.ಸಿದ್ದೇಶ್ವರ, ಎ.ವಿ. ಅರುಣಕುಮಾರ್‌, ಎ.ಆರ್‌. ಮಂಜಪ್ಪ, ಎಂ.ಆರ್‌.ಪ್ರಸನ್ನಕುಮಾರ್‌, ದೇಸ್ಕರ್‌, ಬಿ. ಕೃಷ್ಣಾಮೂರ್ತಿ, ಎಚ್‌.ಮಲ್ಲಿಕಾರ್ಜುನ, ಎಚ್‌. ಎಂ. ಶಿವಪ್ರಕಾಶ್‌, ಎಂ.ವಿ.ವೀರಯ್ಯ, ಬಿ.ಚನ್ನಬಸಪ್ಪ, ಡಿ.ಮಂಜಪ್ಪ, ಸಾಗರ್‌, ಬಸವರಾಜ, ಶೇಖರಪ್ಪ, ವೆಂಕಟೇಶ್‌ ಎಂ.ಪ್ರಸನ್ನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next