Advertisement

ಆರೋಗ್ಯ ಇಲಾಖೆ ಸಿಬ್ಬಂದಿಗೆ ಆಹಾರ ಕಿಟ್‌ ವಿತರಣೆ

06:46 PM May 22, 2020 | Naveen |

ಹರಪನಹಳ್ಳಿ: ದೇಶಕ್ಕೆ ಕಂಠಕವಾಗಿ ಕಾಡುತ್ತಿರುವ ಮಹಾಮಾರಿ ಕೋವಿಡ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಈ ಸೋಂಕು ತಡೆಗಟ್ಟಲು ಅವಿರತವಾಗಿ ಶ್ರಮಿಸುವ ಮೂಲಕ ಮಾನವ ಸಂತತಿ ಉಳಿವಿಗೆ ಹೋರಾಡುತ್ತಿರುವ ಕೋವಿಡ್ ವಾರಿಯರ್ಸ್‌ಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಹೇಳಿದರು.

Advertisement

ಪಟ್ಟಣದ ಹಳೇ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮಂಗಳವಾರ ಎಂ.ಪಿ. ರವೀಂದ್ರ ಪ್ರತಿಷ್ಠಾನದಿಂದ ಏರ್ಪಡಿಸಲಾಗಿದ್ದ ಆಶಾ ಕಾರ್ಯ ಕರ್ತೆಯರಿಗೆ ಹಾಗೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆಹಾರ ಕಿಟ್‌ ಮತ್ತು ಸುರಕ್ಷಾ ಸಾಧನಗಳನ್ನು ವಿತರಿಸಿ ಅವರು ಮಾತನಾಡಿದರು. ಕಳೆದ ಒಂದು ವಾರದಿಂದ ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ತೆರಳಿ ಅಂಗನವಾಡಿ, ಆಶಾ ಮತ್ತು ಎಎನ್‌ ಎಂ ಕಾರ್ಯಕರ್ತರಿಗೆ ಲಂಚ್‌ ಬಾಕ್ಸ್‌, ಮಾಸ್ಕ್, ಪ್ಯಾಡ್‌ ವಿತರಿಸಲಾಗುತ್ತಿದೆ. ಕೋವಿಡ್ ವಾರಿಯರ್ಸ್‌ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಇವರ ಸೇವೆಯನ್ನು ಪ್ರತಿಯೊಬ್ಬರೂ ಮರೆಯಬಾರದು, ಅವರ ಕರ್ತವ್ಯಕ್ಕೆ ಗೌರವ ಕೊಡುವ ಕೆಲಸವನ್ನು ಮಾಡಬೇಕು. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಶಿವಕುಮಾರ್‌, ಪಟ್ಟಣದ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಟಿ.ಎಚ್‌. ಎಂ. ಮಂಜುನಾಥ್‌, ನಿರ್ದೇಶಕ ಎಂ.ವಿ. ಕೃಷ್ಣ, ಮತ್ತೂರು ಮುಖಂಡರಾದ ಅಡವಿಹಳ್ಳಿ ದಕ್ಷಿಣಮೂರ್ತಿ, ಡಿ. ರಾಜಕುಮಾರ್‌, ಮಟ್ಟೇರ ಮುತ್ತಣ್ಣ, ಓ.ಮಹಾಂತೇಶ್‌, ಉದಯಶಂಕರ್‌, ಮತ್ತೂರು ಬಸವರಾಜ್‌, ರಾಜು ಪೂಜಾರ್‌, ರಾಯದುರ್ಗ ವಾಗೇಶ್‌, ಕವಿತಾ ಸುರೇಶ್‌, ಉಮಾಮಹೇಶ್ವರಿ, ಎನ್‌.ಶಂಕರ್‌, ಆನಂದ, ಟಿ.ಗುರು, ವಿಕ್ರಂ, ರವಿಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.