Advertisement

ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಿ: ರಾಮಚಂದ್ರಪ್ಪ

05:20 PM Apr 23, 2020 | Naveen |

ಹರಪನಹಳ್ಳಿ: ಕೊರೊನಾ ನಿಯಂತ್ರಣ ಮಾಡಲು ಸರ್ಕಾರ ರೂಪಿಸುವ ನೀತಿ-ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ನಿವಾರಣೆಗೆ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಶಾಸಕ ಎಸ್‌.ವಿ. ರಾಮಚಂದ್ರಪ್ಪ ಮನವಿ ಮಾಡಿದರು.

Advertisement

ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತಾಲೂಕಿನ 7 ಗ್ರಾಮ ಪಂಚಾಯಿತಿಗಳಾದ ಅರಸೀಕೆರೆ, ತೌಡೂರು, ಪುಣಬಗಟ್ಟ, ಹೊಸಕೋಟೆ, ಉಚ್ಚಂಗಿದುರ್ಗ, ಚಟ್ನಳ್ಳಿ, ಅಣಜಿಗೆರೆ ಗ್ರಾಮ ಪಂಚಾಯಿತಿಗಳಲ್ಲಿ ಬಡವರ ಆಹಾರ ಧಾನ್ಯ ಕಿಟ್‌ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಟಾಸ್ಕ್ಫೋರ್ಸ್‌ ಸಮಿತಿ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್‌ ವಿತರಿಸಿ ಅವರು ಮಾತನಾಡಿದರು.

ಶಾಸಕರ ಅನುದಾನದಲ್ಲಿ ಗ್ರಾಮ ಪಂಚಾಯಿತಿ, ಪೊಲೀಸ್‌ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್‌ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಎಸ್‌.ವಿ ರಾಮಚಂದ್ರ ಅವರ ವೈಯಕ್ತಿಕ ಹಣದಲ್ಲಿ ಉಚ್ಚಂಗಿದುರ್ಗ, ಚಟ್ನಿಹಳ್ಳಿ, ಅಣಜಿಗೆರೆ, ಅರಸೀಕೆರೆ, ಹೊಸಕೋಟೆ, ತವಡೂರು, ಪುಣಬಗಟ್ಟ ಪಂಚಾಯತಿ ವ್ಯಾಪ್ತಿಯ ಬಡ ಕುಟುಂಬದ ಅರ್ಹ ಫಲಾನುಭವಿಗಳಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಪಂ ಇಓ ಅನಂತರಾಜು, ಉಪ ತಹಶೀಲ್ದಾರ್‌ ಫಾತಿಮಾ, ಕಂದಾಯ ನಿರೀಕ್ಷಕ ಶ್ರೀಧರ್‌, ಜಗಳೂರು ತಹಶೀಲ್ದಾರ್‌ ಹುಲ್ಲುಮನೆ ತಿಮ್ಮಣ್ಣ, ಜಗಳೂರು ಬಿಜೆಪಿ ಅಧ್ಯಕ್ಷ ಪಲ್ಲಗಟ್ಟೆ ಮಹೇಶ್‌, ಮುಖಂಡರಾದ ಚಟ್ನಿಹಳ್ಳಿ ರಾಜಪ್ಪ, ಯರಬಳ್ಳಿ ಸಿದ್ದಪ್ಪ, ವೈ.ಡಿ.ಅಣ್ಣಪ್ಪ, ಫಣಿಯಾಪುರ ಲಿಂಗರಾಜ್‌, ಬಾಲೇನಹಳ್ಳಿ ಕೆಂಚನಗೌಡ, ಪರಶುರಾಮಪ್ಪ, ಪಿ.ಎಂ.ಬಾಲಚಂದ್ರಯ್ಯ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಕೆ. ಸಿದ್ದಪ್ಪ, ಆಶಾ ಕಾರ್ಯಕರ್ತರು, ಅಂಗನವಾಡಿ, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next