ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಕೋಲ ಶಾಂತೇಶ್ವರಮಠ ಆವರಣದಲ್ಲಿ
ಕೋವಿಡ್ ವಾರಿಯರ್ಸ್‌ಗೆ ಹೂ ಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು.
ಗ್ರಾಮದ ಆಸ್ಪತ್ರೆ ಆವರಣದಿಂದ ಕೋಲ ಶಾಂತೇಶ್ವರ ಹೊರಗಿನ ಮಠದದವರೆಗೂ ನಡೆದ ಮರವಣಿಗೆಯಲ್ಲಿ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವಾರಿಯರ್ಸ್‌ಗಳಿಗೆ ಹೂಮಳೆಗೈದರು. ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಕೋವಿಡ್ ಹೆಮ್ಮೆಯ ವಿಷಯ. ಸರ್ಕಾರಿ ನೌಕರರು ತಮ್ಮ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವ ಪರಿಣಾಮ ಕೋವಿಡ್ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅನೇಕ ನಿರ್ದೇಶನಗಳನ್ನು ರೂಪಿಸಿದೆ. ಆದರೆ ಅವುಗಳನ್ನು ಸಮಪರ್ಕಕವಾಗಿ ಅನುಷ್ಠಾನ ಮಾಡಬೇಕಾಗಿರುವುದು ಅಧಿಕಾರಿಗಳು ಎಂದರು.
ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕೋವಿಡ್ ಎಲ್ಲಾ ರಂಗಕ್ಕೂ ಹೊಡೆತ ನೀಡಿದೆ. ವಾರಿಯರ್ಸ್‌ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತಿದ್ದೀರಿ. ನಿಮ್ಮ ಸೇವೆ ದೊಡ್ಡದು. ಅರಸೀಕೆರೆ ಜನರು ವಿಶಾಲ ಹೃದಯದವರಾಗಿದ್ದು, ನಿಮ್ಮನ್ನು ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಜಗಳೂರು ತಹಶೀಲ್ದಾರ್ ಹುಲಿಮನಿ ತಿಮ್ಮಣ್ಣ, ಉಪ ತಹಶೀಲ್ದಾರ್ ಫಾತಿಮಾ, ಅರಸೀಕೆರೆ ಪೊಲೀಸ್ ಠಾಣೆಯ ಪಿಎಸ್‌ಐ ಕಿರಣ್‌ಕುಮಾರ್, ವೈ.ಡಿ. ಅಣ್ಣಪ್ಪ, ಗುರುಶಾಂತನಗೌಡ, ಶಾಂತಪಾಟೀಲ್, ತಾಲೂಕು ವೈದ್ಯಾಧಿಕಾರಿ ಇನಾಯಿತವುಲ್ಲಾ, ಚಟ್ನಳ್ಳಿ ರಾಜಪ್ಪ, ಭುವನೇಶ್ವರ್, ಕೆ.ಬಸವರಾಜ್, ವಿಶ್ವನಾಥಯ್ಯ, ಎ.ಎಚ್.ನಾಗರಾಜ್, ವಿಜಯ್ ಕುಮಾರ್, ಎ.ಎಚ್.ಕೊಟ್ರೇಶ್, ಸಲಾಂ ಸಾಹೇಬ್, ಬಸವರಾಜ್, ಎಚ್.ಷಣ್ಮುಖಪ್ಪ, ಸಿದ್ದಪ್ಪ, ಪೂಜಾರ್ ಮರಿಯಪ್ಪ, ಫಣಿಯಾಪುರ ಲಿಂಗಾಪುರ, ಬಾಲೇನಹಳ್ಳಿ ಕೆಂಚನಗೌಡ, ಚೂಟಿ ಅಜಯ್‌ಕುಮಾರ್, ಗೋಪಾಲ್, ಪಲ್ಲಾಗಟ್ಟೆ ಮಹೇಶ್ ಮತ್ತಿತರರು ಇದ್ದರು.