Advertisement

ನಾಲೆ ಒಡೆದು ಜಮೀನಿಗೆ ನುಗ್ಗಿದ ಅಪಾರ ಪ್ರಮಾಣದ ನೀರು : ರೈತರ ಬೆಳೆ ಹಾನಿ

08:26 PM Apr 17, 2022 | Team Udayavani |

ಹುಣಸೂರು : ಹಾರಂಗಿ ಜಲಾಶಯದ ಅಣೆಕಟ್ಟೆಯ ಮುಖ್ಯ ನಾಲೆ ಒಡೆದು ಅಪಾರ ಪ್ರಮಾಣದ ನೀರು ಹರಿದು ಬೆಳೆ ನಷ್ಟವಾಗಿರುವ ಘಟನೆ ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಸಮೀಪ ಶನಿವಾರ ರಾತ್ರಿ ನಡೆದಿದೆ.

Advertisement

ಹಾರಂಗಿ ನಾಲೆಯ ಮಾರೂರು ಬಲದಂಡೆ (ಎಂ.ಬಿ.ಸಿ.) ನಾಲೆಯಲ್ಲಿ ಕಳೆದ ಮೂರು ದಿನಗಳಿಂದ ಬೇಸಿಗೆಯಲ್ಲಿ ಕೆರೆಕಟ್ಟೆಗಳನ್ನು ತುಂಬಿಸಲು ನೀರು ಹಾಯಿಸಲಾಗಿತ್ತು. ಇದೇ ರೀತಿಯಲ್ಲಿ ಕಳೆದ ತಿಂಗಳು ಕೆರೆಕಟ್ಟೆ ತುಂಬಿಸಲು ಹದಿನೈದು-ಇಪ್ಪತ್ತು ದಿನ ನೀರು ಬಿಟ್ಟು ಕೆರೆಕಟ್ಟೆ ತುಂಬಿಸುತ್ತಿದ್ದರು ಕಳೆದ ಮೂರು ದಿನಗಳಿಂದ ಸಂಜೆ ವೇಳೆ ಸುರಿದ ಮಳೆಗೆ ನಾಲೆಯಲ್ಲಿ ನೀರು ಹೆಚ್ಚಾಗಿದ್ದರಿಂದ ನಾಲೆ ಒಡೆದು ಹೋಗಿ ಅಕ್ಕಪಕ್ಕದ ಜಮೀನು ಹಾಗೂ ತೋಟಗಳಿಗೆ ನೀರು ನುಗಿದ್ದು ಬೆಳೆದ ಬೆಳೆ ನಷ್ಟವಾಗಿದೆ.

ಹಿರೀಕ್ಯಾತನಹಳ್ಳಿ ಗ್ರಾಮದ ಸ್ವಾಮಿಗೌಡ ಎಂಬುವರಿಗೆ ಸೇರಿದ ಶುಂಠಿ ನೀರಿನಲ್ಲಿ ಮುಳುಗಿ ಸ್ವಲ್ಪ ಕೊಚ್ಚಿಕೊಂಡು ಹೋಗಿದೆ. ಶೀವೇಗೌಡ ಎಂಬುವರ ಒಂದು ಎಕರೆಗೂ ಹೆಚ್ಚು ಕುಂಬಳ ಗಿಡ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ ಸುತ್ತಮುತ್ತಲ ಹಲವಾರು ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ಕೊಚ್ಚಿಹೋಗಿದ್ದರೆ ಕೆಲವರ ಜಮೀನಿನಲ್ಲಿ ನೀರು ತುಂಬಿಕೊಂಡಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಲಾ ಏರಿಯನ್ನು ತಕ್ಷಣವೇ ದುರಸ್ತಿ ಪಡಿಸಿ ರೈತರ ನೆರವಿಗೆ ಬರಬೇಕೆಂದು ರೈತರು ಮನವಿ ಮಾಡಿದ್ದಾರೆ.

Advertisement

ಸ್ಥಳಕ್ಕೆ ಅಧಿಕಾರಿ ಭೇಟಿ: ವಿಷಯ ತಿಳಿದ ಹಾರಂಗಿ ಎಂಜಿನಿಯರ್ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿ ನೀರನ್ನು ಸಂಪೂರ್ಣ ಬಂದ್ ಮಾಡಿಸಿ ನಾಲೆ ದುರಸ್ತಿ ಬಗ್ಗೆ ಮೇಲಾಧಿಕಾರಿಗೆ ತಿಳಿಸಿ ಕ್ರಮವಹಿಸಿ ನಾಲೆ ಅಕ್ಕಪಕ್ಕದ ಜಮಿನಿನ ರೈತರಿಗೆ ಆಗಿರುವ ನಷ್ಟದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next