Advertisement
ಧ್ವಜ ಹಾರಿಸುವಾಗ ಕೆಲವು ಅಂಶಗಳು ನೆನಪಿನಲ್ಲಿರಲಿ.
Related Articles
Advertisement
ವಿದೇಶಿ ಅತಿಥಿಗೆ ಕೇಂದ್ರದಿಂದ ಕಾರು ನೀಡಿದರೆ, ಆ ಕಾರಿನ ಬಲಭಾಗದಲ್ಲಿ ತ್ರಿವರ್ಣ ಧ್ವಜವಿದ್ದರೆ, ಆ ದೇಶದ ರಾಷ್ಟ್ರಧ್ವಜ ಎಡಭಾಗದಲ್ಲಿರುತ್ತದೆ. ರಾಷ್ಟ್ರಪತಿಗಳು ವಿಶೇಷ ರೈಲಿನಲ್ಲಿ ಪ್ರಯಾಣಿಸಿದರೆ, ರೈಲು ನಿಂತಿರುವಾಗ ಪ್ಲಾಟ್‌ಫಾರ್ಮ್‌ನಲ್ಲಿರುವ ಚಾಲಕರ ಕ್ಯಾಬಿನ್‌ನಲ್ಲಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗುತ್ತದೆ. ರಾಷ್ಟ್ರಪತಿಗಳು ವಿಮಾನದಲ್ಲಿ ಪ್ರಯಾಣಿಸಿದರೆ ಅದರ ಮೇಲೆ ರಾಷ್ಟ್ರಧ್ವಜವನ್ನೂ ಹಾಕಲಾಗುತ್ತದೆ. ಅದೇ ರೀತಿ, ಪ್ರಧಾನಿ ಅಥವಾ ಉಪರಾಷ್ಟ್ರಪತಿ ಯಾವುದೇ ದೇಶಕ್ಕೆ ಪ್ರಯಾಣಿಸಿದಾಗ, ವಿಮಾನದಲ್ಲಿ ರಾಷ್ಟ್ರಧ್ವಜವನ್ನು ಹಾಕಲಾಗುತ್ತದೆ.
ಮನೆಯಲ್ಲಿ ರಾಷ್ಟ್ರಧ್ವಜ ಹಾರಸಿದಾಗ ಕಂಬ ಯಾವುದೇ ಬದಿಗೆ ವಾಲಿರಬಾರದು. ಧ್ವಜ ನೆಲಕ್ಕೆ ತಾಗಬಾರದು.
ಭಾರತದ ತ್ರಿವರ್ಣದ ಧ್ವಜಾರೋಹಣ ಮಾಡುವಾಗ ಯಾವಾಗಲೂ ಕೇಸರಿ ಬಣ್ಣ ಮೇಲೆ ಬರುವಂತೆ, ಹಸುರು ಬಣ್ಣ ಕೆಳಗೆ ಬರುವಂತೆ ನೋಡಿಕೊಳ್ಳಿ.
ಧ್ವಜದ ಮೇಲೆ ಏನನ್ನೂ ಬರೆಯುವಂತಿಲ್ಲ. ಯಾವುದೇ ಉಡುಗೆ ಅಥವಾ ಸಮವಸ್ತ್ರದ ಯಾವುದೇ ಭಾಗದಲ್ಲಿ ತ್ರಿವರ್ಣ ಧ್ವಜವನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಕರವಸ್ತ್ರ, ದಿಂಬು ಅಥವಾ ಕರವಸ್ತ್ರವು ತ್ರಿವರ್ಣ ಧ್ವಜದ ವಿನ್ಯಾಸವನ್ನು ಹೊಂದಿರಬಾರದು.
ಇದನ್ನೂ ಓದಿ:ಮೋದಿಯೇ ಮುಂದಿನ ಪ್ರಧಾನಿಯಾಗಲಿ; ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎಗೆ ಬಹುಮತ
ಧ್ವಜವನ್ನು ಮಡಚಲೂ ನಿಯಮವಿದೆ. ಧ್ವಜವನ್ನು ಸ್ವತ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾಕಾರಾದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ.
ರಾಷ್ಟ್ರಧ್ವಜ ಹರಿದರೆ ಏನು ಮಾಡಬೇಕು ಎಂಬ ಪ್ರಶ್ನೆ ಹಲವರಿಗಿದೆ. ಒಂದು ವೇಳೆ ಧ್ವಜವು ಹರಿದರೆ ಅಥವಾ ಬಳಸಲಾರದ ಸ್ಥಿತಿಗೆ ಬಂದರೆ, ಅದನ್ನು ಖಾಸಗಿಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು. ಹಾಗೆಯೇ ವಿಶೇಷ ದಿನಗಳಂದು (ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ) ಪೇಪರ್ ಧ್ವಜಗಳನ್ನು ಬಳಸಬಹುದು. ಅವುಗಳನ್ನೂ ಕೂಡ ಅಷ್ಟೇ ಗೌರವಯುತವಾಗಿ ಖಾಸಗಿಯಾಗಿ ಸುಟ್ಟು ಹಾಕಬೇಕು.