Advertisement

ದೇಶದೆಲ್ಲೆಡೆ “ಹರ್‌ ಘರ್‌ ತಿರಂಗಾ’ಸಿದ್ಧತೆ ಜೋರು

11:39 PM Aug 06, 2022 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ “ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ದೇಶಾದ್ಯಂತ ಜೋರಾಗಿ ನಡೆಯುತ್ತಿದೆ. ಶನಿವಾರ ದಂದು ದಿಲ್ಲಿಯಲ್ಲಿ ಶನಿವಾರ ವಿಶೇಷ ತಿರಂಗಾ ಯಾತ್ರೆ ನಡೆಸಲಾಗಿದ್ದು, ಅದರಲ್ಲಿ 750 ಬೈಕ್‌ಗಳಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

Advertisement

ಗುಜರಾತ್‌ನ ಆದಿವಾಸಿ ಸಮು ದಾಯದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಧ್ವಜಗಳನ್ನು ಹಾರಿಸಲೆಂದು ಒಟ್ಟು 5.5 ಲಕ್ಷ ಬಿದಿರಿನ ಕೋಲುಗಳನ್ನು ಮಾಡುವ ಜವಾಬ್ದಾರಿಯನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ನೀಡಿದೆ.

ಥಾಣೆಯಲ್ಲಿ 17 ಲಕ್ಷ ಧ್ವಜಾರೋಹಣ?: ಮಹಾ ರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಅಭಿಯಾನದ ಅಂಗವಾಗಿ ಒಟ್ಟು 17 ಲಕ್ಷ ಧ್ವಜಗಳನ್ನು ವಿತರಿಸಲು ಸಿದ್ಧತೆ ನಡೆಸ ಲಾಗಿದೆ. ಜಿಲ್ಲೆಯಲ್ಲಿ 3.9 ಲಕ್ಷಕ್ಕೂ ಅಧಿಕ ಮನೆ, 13 ಲಕ್ಷ ಸರ್ಕಾರಿ, ಖಾಸಗಿ ಕಟ್ಟಡಗಳಿದ್ದು, ಅವುಗಳ ಮೇಲೆ ಧ್ವಜಾರೋಹಣ ಆಗಲಿದೆ ಎಂದಿದೆ ಜಿಲ್ಲಾಡಳಿತ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next