Advertisement

“ಹರ್‌ ಘರ್‌ ತಿರಂಗಾ’ವಿಡಿಯೋ ಗೀತೆ ರಿಲೀಸ್‌

11:01 PM Aug 04, 2022 | Team Udayavani |

ಮುಂಬಯಿ/ಹೊಸದಿಲ್ಲಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಯಲ್ಲಿ ಕೇಂದ್ರ ಸಂಸ್ಕೃತಿ ಸಚಿ ವಾಲಯ 4 ನಿಮಿಷ 15 ಸೆಕೆಂಡ್‌ಗಳ “ಹರ್‌ ಘರ್‌ ತಿರಂಗಾ’ ಧ್ಯೇಯಗೀತೆ ಇರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ ಲೋಡ್‌ ಮಾಡಿದೆ.

Advertisement

ಅದರಲ್ಲಿ ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ಕಪಿಲ್‌ ದೇವ್‌, ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ, ಅನುಪಮ್‌ ಖೇರ್‌, ಆಶಾ ಭೋಸ್ಲೆ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ತಾರೆಯರು ಪಾಲ್ಗೊಂಡಿ ದ್ದಾರೆ. ಬಾಲಿವುಡ್‌ ನಟ ಅಮಿತಾಭ್‌ ಅವರು ಹಾಡಿಗೆ ದನಿಗೂಡಿಸಿದ್ದಾರೆ.

ವಿಡಿಯೋದಲ್ಲಿ ಕಾಣಿಸಿ ಕೊಂಡಿರುವ ದಕ್ಷಿಣ ಭಾರತ ದ ಸಿನಿಮಾ ಕ್ಷೇತ್ರದ ಏಕೈಕ ತಾರೆ ಪ್ರಭಾಸ್‌. ವಿಡಿಯೋವನ್ನು ದೇಶದ ಕ್ರೀಡೆ, ದೇಶಿಯವಾಗಿ ಅಭಿವೃದ್ಧಿಗೊಳಿಸಿ ಉಡಾಯಿಸಿದ ಕ್ಷಿಪಣಿಗಳು, ದೇಶದ ಅದ್ಧೂರಿ ಇತಿಹಾಸ, ಜನರು, ಪ್ರಮುಖ ಸಾಧನೆಗಳನ್ನು ಸಮ್ಮಿಳನಗೊಳಿಸುವಂತೆ ಮನಮೋಹಕವಾಗಿ ಚಿತ್ರಿಸಲಾಗಿದೆ. ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಚಿತ್ರಿಸುವಲ್ಲಿ ಈ ವಿಡಿಯೋ ಗೀತೆ ಯಶಸ್ವಿಯಾಗಿದೆ ಎಂದು ಟ್ವಿಟರ್‌ನಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದ ಮುಕ್ತಾಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದಾರೆ.

ಆ.7ಕ್ಕೆ ಆಜಾದಿ ಸ್ಯಾಟ್‌ ನಭಕ್ಕೆ: ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಆ.7ರಂದು ಇಸ್ರೋ “ಆಜಾದಿ ಸ್ಯಾಟ್‌’ ಎಂಬ ಉಪಗ್ರಹವನ್ನು ನಭಕ್ಕೆ ಕಳುಹಿಸ ಲಿದೆ. ದೇಶದ 750 ವಿದ್ಯಾರ್ಥಿನಿ ಯರು ಅಭಿವೃದ್ಧಿಪಡಿಸಿರುವ 75 ಪೇಲೋ ಡ್‌ಗಳುಳ್ಳ ಉಪಗ್ರಹವನ್ನು ಸ್ಮಾಲ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ನಲ್ಲಿ ಉಡಾಯಿಸಲಾಗುತ್ತದೆ. ಶ್ರೀಹರಿಕೋಟಾದಿಂದ ಬೆಳಗ್ಗೆ 9.18ಕ್ಕೆ ಉಪಗ್ರಹ ನಭಕ್ಕೆ ಚಿಮ್ಮಲಿದೆ.

Advertisement

ಕನ್ನಡದಲ್ಲಿ ಕೆ.ಎಲ್‌. ರಾಹುಲ್‌ :

ಟೀಂ ಇಂಡಿಯಾದ ಉಪ ನಾಯಕ ಕೆ.ಎಲ್‌.ರಾಹುಲ್‌ ಕೂಡ “ಹರ್‌ ಘರ್‌’ ಧ್ಯೇಯಗೀತೆ ಯಲ್ಲಿ ಕಾಣಿಸಿಕೊಂಡಿ ದ್ದಾರೆ. 2 ನಿಮಿಷ 20 ಸೆಕೆಂಡ್‌ಗಳ ವಿಡಿಯೋ ದಲ್ಲಿ ಅವರು ಕನ್ನಡದಲ್ಲಿ “ಮನೆ ಮನೆಗೂ ತ್ರಿವರ್ಣ’ ಎಂದು ಹಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next