ಪಣಜಿ: ಮುಂಬರುವ ಐದು ವರ್ಷಗಳಲ್ಲಿ ಗೋವಾ ರಾಜ್ಯದಲ್ಲಿನ ಪ್ರತಿಯೊಂದು ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆಯೇ…? ಎಂಬುದನ್ನು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರಿಂದ ಖಚಿತಪಡಿಸಿಕೊಳ್ಳಲು ಸಾಧ್ಯವೇ..? ಮಳೆಗಾಲದಲ್ಲಂತೂ ಗೋವಾ ರಾಜ್ಯದ ಜನರು ಕೊಳಕು ಕುಡಿಯುವ ನೀರಿನ ಪೂರೈಕೆಯಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಸಾವಂತ್ ರವರ ಹರ್ ಘರ್ ನಲ್ ಯೋಜನೆ ಸಂಪೂರ್ಣ ವಿಫಲವಾಗಿದ್ದು, ಜನರು ಕುಡಿಯುವ ನೀರಿಗಾಗಿ ಬಾವಿಗಳನ್ನು ಅವಲಂಭಿಸಿರುವಂತಾಗಿದೆ ಎಂದು ಆಮ್ ಆದ್ಮಿ ನಾಯಕ ಮಹಾದೇವ್ ನಾಯ್ಕ ವಾಗ್ದಾಳಿ ನಡೆಸಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ರಾಜ್ಯದಲ್ಲಿ ಸಪ್ಟೆಂಬರ್ 1 ರಂದ ಪ್ರತಿ ಕುಟುಂಬಗಳಿಗೆ ಉಚಿತ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ನಿರ್ಣಯವನ್ನು ಠೀಕಿಸಿದರು. ಮುಖ್ಯಮಂತ್ರಿ ಸಾವಂತ್ ಸರ್ಕಾರ ಮಹದಾಯಿ ನದಿಗೆ ಗೋವಾದ ಸ್ವಾಭಾವಿಕ ಹಕ್ಕುಗಳನ್ನು ಪಡೆಯಲು ವಿಫಲವಾದ ಕಾರಣ ಎದುರಾಗುತ್ತಿರುವ ಬಿಕ್ಕಟ್ಟನ್ನು ಸಹ ಯಾರೂ ಮರೆಯಬಾರದು.
ಇದನ್ನೂ ಓದಿ :ಜಮ್ಮು-ಕಾಶ್ಮೀರ: ಕುಲ್ಗಾಮ್ ನಲ್ಲಿ ಉಗ್ರರಿಂದ ಬಿಜೆಪಿ ಮುಖಂಡನ ಗುಂಡಿಟ್ಟು ಹತ್ಯೆ
ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಯಾವುದೇ ಯೋಜನೆ ಅಥವಾ ಇಚ್ಛೆಯನ್ನು ಸರ್ಕಾರ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದುವರೆಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ವಿಫಲವಾದ ಸರ್ಕಾರ ಉಚಿತ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿಗಳ ಭರವಸೆಯನ್ನು ಹೇಗೆ ನಂಬಲು ಸಾಧ್ಯ ಎಂದು ಆಮ್ ಆದ್ಮಿ ನಾಯಕ ಮಹಾದೇವ ನಾಯ್ಕ ವಾಗ್ದಾಳಿ ನಡೆಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.