ಭೂಮಿಯ ಮೇಲೆ ಕೆಲವು ಸಂಬಂಧಗಳಿಗೆ ಬೆಲೆ ಕಟ್ಟಲಾಗದು. ಅದರಲ್ಲೂ ಸೋದರ ಸಹೋದರಿಯರ ಸಂಬಂಧವೂ ಪ್ರಮುಖವಾದುದು. ಈ ಒಂದು ಸಂಬಂಧದಲ್ಲಿ ಒಬ್ಬ ಉತ್ತಮ ಸ್ನೇಹಿತ ಎರಡನೇ ಪೋಷಕರು ಸಿಲ್ಲಿ ಜಗಳಗಳು ಹಾಗೂ ರಕ್ಷಕನನ್ನು ಕಾಣಬಹುದು.
ಸೋದರ ಸಹೋದರಿಯರ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯದೆ ಉಳಿಯಲು ಪ್ರತಿವರ್ಷ ರಕ್ಷಾಬಂಧನ ಹಬ್ಬವನ್ನ ಭಾರತೀಯರು ಹೆಚ್ಚಾಗಿ ಆಚರಿಸುತ್ತಾರೆ.ಇಂತಹ ಅನುಬಂಧದ ಹಬ್ಬವೂ ನೀಡಿದ ನನ್ನಲ್ಲಿನ ಕೆಲವು ಬಾಲ್ಶದ ನೆನಪುಗಳನ್ನ ಹಂಚಿಕೊಳ್ಳುವೆ.
ಬಾಲ್ಯದಲ್ಲಿ ಅಣ್ಣನ ಕೈಗೆ ಕಟ್ಟುವಂತಹ ರಾಕಿಯ ಮಜಾವೇ ಮಜಾ. ರೆಕ್ಕೆಗಳಂತಿರುವ ಬಂಗಾರ ಬಣ್ಣದ ರಾಕಿಯೂ ಅಣ್ಣನ ಕೈಗಿಂತ ಎರಡು ಪಟ್ಟು ದೊಡ್ಡದು ಅದು ಕೂಡ ಅಜ್ಜಿ ನೀಡಿದ ಹಣದಿಂದ ಕೊಂಡುತರುತ್ತಿದ್ದು. ಆ ದಾರವನ್ನು ಕಟ್ಟಿ ಅಣ್ಣ ನೀಡುವ ಹತ್ತು ರೂಪಾಯಿಗೆ ಕೈಚಾಚುತ್ತಿದ್ದದು ಅದು ಕೂಡ ಅಜ್ಜಿ ನೀಡುತ್ತಿದ್ದ ಹಣ ಎಂಬುದು ನೆನೆದರೆ ನಗು ಮೂಡುವುದು. ಇಂದೂ ವಿವಿಧ ಬಣ್ಣ ವಿನ್ಯಾಸದ ದಾರಗಳಿವೆ ನಮ್ಮ ಹಣದಿಂದಲೇ ತಂದು ಅಣ್ಣನೇ ಕೊಂಡು ಕೊಡುವ ಉಡುಗೊರೆಯೂ ಮಟ್ಟ ಹೆಚ್ಚಾಗಿದೆ ಆದರೆ ಅಜ್ಜಿ ನೀಡಿದ ಹಣದ ಉಡುಗೊರೆಯ ಖುಷಿಯೂ ಕೊಂಚ ಜಾಸ್ತಿಯೇ.
ಇಂತಹ ರಕ್ಷಣೆ ಹಾಗೂ ಬಂಧನವು (ರಕ್ಷಾಬಂಧನ) ಸಹೋದರನಿಗೆ ದೀರ್ಘಾಯುಷ್ಯ ಆರೋಗ್ಯ ನೀಡಲಿ ಎಂದು ಬೇಡುವೇ ದೇವರಲಿ. ನನ್ನ ಎಲ್ಲಾ ಸಹೋದರರಿಗೆ ರಕ್ಷಾಬಂಧನ ಹಬ್ಬವೆಂಬ ಅನುಬಂಧದ ಶುಭಾಶಯಗಳು.
ಅನಿತ.ಕೆ.ಬಿ
ಗೋಪನಾಳ್
ದಾವಣಗೆರೆ