Advertisement

ಸೊಬಗಿನ ದಿನ ಸ್ವಾತಂತ್ರ್ಯೋತ್ಸವ

09:54 PM Aug 14, 2020 | Karthik A |

ಸ್ವಾತಂತ್ರ್ಯ ದಿನಾಚರಣೆ ನಮಗೆಲ್ಲ ಕೇವಲ ಒಂದು ಆಚರಣೆ ಅಥವಾ ಹಬ್ಬವಲ್ಲ, ಭಾರತೀಯರಾದ ನಮಗೆ ಅದೊಂದು ಮಹತ್ವಪೂರ್ಣ ದಿನವಾಗಿದೆ.

Advertisement

ಇದನ್ನು ನಾವು ಪ್ರತಿ ವರ್ಷ ಆಗಸ್ಟ್‌ 15ರಂದು ಆಚರಿಸುತ್ತೇವೆ.

ದೇಶದಲ್ಲಿ ಬ್ರಿಟಿಷರ ಬಹುದಿನಗಳ ಆಳ್ವಿಕೆಯ ಮತ್ತು ಗುಲಾಮಗಿರಿಯ ಅನಂತರ 1947ರಲ್ಲಿ ಅಂದರೆ ಬಹು ದೀರ್ಘಾವಧಿಯ ಅನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿತು.

1947ರ ಆಗಸ್ಟ್‌ 15ರ ದಿನವೇ ಬ್ರಿಟಿಷ್‌ ಸಾಮ್ರಾಜ್ಯದಿಂದ ಉಪಲಕ್ಷ್ಯವಾಗಿ, ಇಡೀ ನಮ್ಮ ದೇಶದಲ್ಲಿ ಗೆಜೆಟೆಡ್‌ ಆಗಿ ರಜೆಯನ್ನು ಘೋಷಿಸಲಾಯಿತು.

ಬ್ರಿಟಿಷರಿಂದ ಮುಕ್ತರಾಗೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದಾಗ್ಯೂ ನಮ್ಮ ಸ್ವತಂತ್ರ ಸೇನಾನಿಗಳು, ರಾಜನೀತಿಯ ನೇತಾರರು ಮತ್ತು ಭಾರತೀಯರು, ಸ್ವಾತಂತ್ರ್ಯ ಪಡೆಯುವುದರಲ್ಲಿ ದೃಢ ಮನಸ್ಕರಾಗಿದ್ದರು.

Advertisement

ಅದರಲ್ಲಿ 15 ಆಗಸ್ಟ್‌ 1947ರಲ್ಲಿ ಸಫ‌ಲರಾದರು. ಆಗ ಭಾರತದ ವಿಧಾನಸಭೆಯಲ್ಲಿ ಶಾಸಕಾಂಗ ಅಧಿಕಾರಿಗಳನ್ನು ನೇಮಕ ಮಾಡಿದರು.

ಲವರಂತೂ ಕೇವಲ ಆರಾಮದ ಸಲುವಾಗಿಯೋ ಅಥವಾ ಸ್ವಾತಂತ್ರ್ಯದ ಚಿಂತೆಗಾಗಿಯೂ ಅಲ್ಲ, ಮುಂಬರುವ ತಮ್ಮ ಪೀಳಿಗೆಗಾಗಿ ಸ್ವಾತಂತ್ರ್ಯ ಪಡೆಯುವುದರಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದರು.

ಅವರೆಲ್ಲ ಪೂರ್ಣ ರೀತಿಯ ಸ್ವಾತಂತ್ರ್ಯ ಪಡೆಯುವುದರ ಸಲುವಾಗಿ ಹಿಂಸೆ ಮತ್ತು ಅಹಿಂಸೆಯ ಮಾರ್ಗವಾಗಿ ಪ್ರತಿರೋಧ ಸಹಿತ ಸ್ವಾತಂತ್ರ್ಯಆಂದೋಲನವನ್ನು ನಡೆಸುವುದರ ಮೂಲಕ ತಮ್ಮ ಗುರಿವನ್ನು ಚಾಲ್ತಿಯಲ್ಲಿಟ್ಟಿದ್ದರು.

ಆದಾಗ್ಯೂ ಪಾಕಿಸ್ಥಾನದ ವಿಭಜನೆಯ ಅನಂತರ ಈ ಕ್ರಮ ಕೆಲವೊಂದು ವರ್ಗಗಳಿಗೆ ಸ್ವೀಕೃತವಾಗಿರಲಿಲ್ಲ. ಪರಿಣಾಮ ಎರಡು ಪಕ್ಷಗಳಲ್ಲಿ ದಂಗೆಗಳೇ ನಡೆದು ಹೋದವು. ಅದೊಂದು ಭಯಾನಕದ ದಂಗೆಯೇ ಆಗಿತ್ತು. ಪರಿಣಾಮ ಸಾಮೂಹಿಕ ಸಾವುನೋವು ಮತ್ತು ದೊಡ್ಡ ಪ್ರಮಾಣದಲ್ಲಿ ಜನರ ಸ್ಥಳಾಂತರವು (15 ಮಿಲಿಯನ್‌ ಗಿಂತಲೂ ಅಧಿಕ) ಆಗಿತ್ತು.

ಸಂಗಮೇಶ ಸಜ್ಜನ, ಕಲಬುರಗಿ

 

Advertisement

Udayavani is now on Telegram. Click here to join our channel and stay updated with the latest news.

Next