Advertisement

ಹ್ಯಾಪಿ ಎಂಡಿಂಗ್‌ ಹರಿಪ್ರಿಯಾ ನಾಯಕಿ

04:05 AM Jun 27, 2020 | Lakshmi GovindaRaj |

ಹ್ಯಾಪಿ ಎಂಡಿಂಗ್‌…ಈ ಪದ ಕೇಳುತ್ತಿದ್ದಂತೆಯೇ, ಎಲ್ಲರಿಗೂ ಒಂದು ರೀತಿಯ ಖುಷಿ ಆಗೋದು ನಿಜ. ಹಾಗಂತ ಇನ್ನೇನೋ ಅರ್ಥ ಕಲ್ಪಿಸಿಕೊಳ್ಳಬೇಕಿಲ್ಲ. ಹೌದು, ಇದು ಸಿನಿಮಾದ ಶೀರ್ಷಿಕೆ. “ಫ‌ಸ್ಟ್‌ರ್‍ಯಾಂಕ್‌’ ಖ್ಯಾತಿಯ ಗುರುನಂದನ್‌ ಈ  ಚಿತ್ರದ ಹೀರೋ. ಹರಿಪ್ರಿಯಾ ಅವರಿಗೆ ನಾಯಕಿ. ಈಗಾಗಲೇ ಬಹುತೇಕ ಚಿತ್ರದ ಚಿತ್ರೀಕರಣ ಮುಗಿದಿದ್ದು ಇಷ್ಟರಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

Advertisement

ಈ ಸಿನಿಮಾ ಆರ್‌ಎಮ್‌ಜಿಎಸ್‌ ಎಂಟರ್‌ಪ್ರೈಸಸ್‌ ಬ್ಯಾನರ್‌ನಲ್ಲಿ ರಮೇಶ್‌  ನಿರ್ಮಾಣ ಮಾಡುತ್ತಿದ್ದಾರೆ. ಜಯಣ್ಣ ಫಿಲ್ಮ್ಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಇನ್ನು, ವಿಜಯ್‌ ಕಿರಣ್‌ ನಿರ್ದೇಶನ ಮಾಡಿದ್ದಾರೆ. “ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ. ಗುರುನಂದನ್‌ ಅವರಿಗೆ ಹೇಳಿಮಾಡಿಸಿದ ಕಥೆ ಇದು. ಔಟ್‌  ಅಂಡ್‌ ಔಟ್‌ ಕಾಮಿಡಿ ಇಲ್ಲಿರಲಿದ್ದು, ರೊಮ್ಯಾನ್ಸ್‌, ಎಮೋಷನ್ಸ್‌ಗೂ ಜಾಗವಿದೆ.

ಬಹುತೇಕ ಚಿತ್ರೀಕರಣ ಮುಗಿದಿದೆ. ಒಂದು ಡ್ಯುಯೆಟ್‌ ಸಾಂಗ್‌ ಮಾತ್ರ ಬ್ಯಾಲೆನ್ಸ್‌ ಇತ್ತು. ಮಾರ್ಚ್‌ನಲ್ಲೇ ಸ್ವಿಜ್ಜರ್‌ಲ್ಯಾಂಡ್‌ಗೆ ಹೋಗಬೇಕಿತ್ತು. ಆದರೆ,  ಕೊರೊನಾ ಸಮಸ್ಯೆ ಎದುರಾಗಿದ್ದರಿಂದ ಶೂಟಿಂಗ್‌ ಕೈಬಿಡಲಾಯಿತು. ಈ ವೇಳೆ ನಾವು ಡಬ್ಬಿಂಗ್‌ ಕೆಲಸ ಮಾಡಿದ್ದೇವೆ. ಸದ್ಯಕ್ಕೆ ಸಾಧುಕೋಕಿಲ ಮತ್ತು ನಾಯಕಿ ಹರಿಪ್ರಿಯಾ ಅವರ ಡಬ್ಬಿಂಗ್‌ ಮಾಡಿದರೆ, ಡಬ್ಬಿಂಗ್‌ ಕಂಪ್ಲೀಟ್‌ ಆಗಲಿದೆ.

ಚಿತ್ರದಲ್ಲಿ ಐವರ ಕಥೆ ಇದೆ. ಐವರ ಮಧ್ಯೆ ನಡೆಯುವಂತಹ ಕಥೆಯೇ ಒಂದು ರೀತಿ ಮಜಾ ಕೊಡುತ್ತೆ. ಗುರುನಂದನ್‌ ಜೊತೆಯಲ್ಲಿ ಸಾಧುಕೋಕಿಲ, ಶಿವರಾಜ್‌ ಕೆ.ಆರ್‌.ಪೇಟೆ, ಅಶೋಕ್‌, ವಿಜಯ್‌ ಚೆಂಡೂರ್‌, ಮನು ಹೈಲೈಟ್‌.  ಎಲ್ಲರಿಗಿಂತಲೂ ಇಲ್ಲಿ ಸಾಧುಕೋಕಿಲ ಅವರೇ ಸಖತ್‌ ನಗಿಸುತ್ತಾರೆ ಮತ್ತು ಹೈಲೈಟ್‌ ಕೂಡ ಅವರೇ ಎನ್ನುವುದು ನಿರ್ದೇಶಕರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next