Advertisement

ದಾವೂದ್‌ ಹುಟ್ಟುಹಬ್ಬ ಆಚರಿಸಿದವನಿಗಾಗಿ ಶೋಧ

09:56 AM Dec 28, 2019 | Hari Prasad |

ಮುಂಬಯಿ: ಕ್ರಿಮಿನಲ್‌ ಆರೋಪಿಯೊಬ್ಬ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ 64ನೇ ಹುಟ್ಟುಹಬ್ಬ ಆಚರಿಸಿ, ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾನೆ. ಆ ಪೋಸ್ಟ್‌ ಭಾರೀ ವೈರಲ್‌ ಆಗುತ್ತಲೇ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಈ ಕುರಿತು ತನಿಖೆ ಆರಂಭಿಸಿ, ಆತನಿಗಾಗಿ ಬಲೆ ಬೀಸಿದ್ದಾರೆ.

Advertisement

ಈ ಪೋಸ್ಟನ್ನು ಶೇರಾ ಚಿಕ್ನ ಎಂಬಾತನ ಅಕೌಂಟ್‌ನಲ್ಲಿ ಹಾಕಲಾಗಿದೆ. 5 ಕೇಕ್‌ಗಳು, ದಾವೂದ್‌ನ 3 ಫೋಟೋಗಳನ್ನು ಇದರಲ್ಲಿ ಅಪ್‌ಲೋಡ್‌ ಮಾಡಿ, ‘ಹ್ಯಾಪಿ ಬರ್ತ್‌ಡೇ ಬಾಸ್‌’ ಎಂಬ ಅಡಿ ಬರೆಹವನ್ನು ನೀಡಲಾಗಿದೆ. ಈ ಸಂಭ್ರಮಾಚರಣೆ ಡೊಂಗ್ರಿಯಲ್ಲಿ ಮಾಡಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next