Advertisement

ವಿಶ್ ಮಾಡಿ; ಹುಟ್ಟುಹಬ್ಬದ ಸಂಭ್ರಮ, ಸ್ಪಿನ್ ಮಾಂತ್ರಿಕ ಕುಂಬ್ಳೆ@48

03:55 PM Oct 17, 2018 | Sharanya Alva |

ಬೆಂಗಳೂರು:ಭಾರತದ ಮಾಜಿ ಕ್ರಿಕೆಟ್ ಆಟಗಾರ, ಸ್ಪಿನ್ ಬೌಲಿಂಗ್ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಕನ್ನಡಿಗ ಅನಿಲ್ ಕುಂಬ್ಳೆಗೆ ಬುಧವಾರ 48ನೇ ಹುಟ್ಟುಹಬ್ಬದ ಸಂಭ್ರಮ. ಕುಂಬ್ಳೆ ಹುಟ್ಟುಹಬ್ಬಕ್ಕೆ ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿನೋದ್ ಕಾಂಬ್ಳಿ, ಬಿಸಿಸಿಐ ಸೇರಿದಂತೆ ಗಣ್ಯಾತೀಗಣ್ಯರು ಶುಭಹಾರೈಸಿದ್ದಾರೆ.

Advertisement

1970ರ ಅಕ್ಟೋಬರ್ 17ರಂದು ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ ಬೆಂಗಳೂರಿನಲ್ಲಿ ಜನಿಸಿದ್ದರು. ಇವರ ತಂದೆ ಕೃಷ್ಣಸ್ವಾಮಿ ಹಾಗೂ ತಾಯಿ ಸರೋಜ. ಪೋಷಕರು ಮೂಲತಃ ಕಾಸರಗೋಡು ಮೂಲದವರು. ಕುಂಬ್ಳೆ ಲೆಗ್ ಸ್ಪಿನ್ನರ್, ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದರು.  ಚೇತನಾ ಅವರನ್ನು ಕುಂಬ್ಳೆ ವಿವಾಹವಾಗಿದ್ದು, ದಂಪತಿಗೆ ಪುತ್ರ ಮಯಾಸ್, ಪುತ್ರಿ ಸ್ವಸ್ತಿ ಹಾಗೂ ಆರುಣಿಯನ್ನು ದತ್ತು ಪುತ್ರಿಯನ್ನಾಗಿ ಪಡೆದಿದ್ದಾರೆ.

ಜುಂಬೋ ಜೆಟ್ ಎಂದೇ ಹೆಸರಾಗಿದ್ದ ಅನಿಲ್ ಕುಂಬ್ಳೆ ಕ್ರಿಕೆಟ್ ಲೋಕದ ಅದ್ಭುತ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿದ್ದರು. ತಮ್ಮ ಮಾಂತ್ರಿಕ ಸ್ಪಿನ್ ಬೌಲಿಂಗ್ ನಿಂದಾಗಿಯೇ ದಾಖಲೆಯ ವಿಕೆಟ್ ಪಡೆದ ಕೀರ್ತಿ ಇವರದ್ದಾಗಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಅನಿಲ್ ಕುಂಬ್ಳೆ 530ಕ್ಕೂ ಅಧಿಕ ವಿಕೆಟ್ ಗಳನ್ನು ಕಿತ್ತಿದ್ದರು, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸೀಸ್ ಆಟಗಾರ ಶೇನ್ ವಾರ್ನ್ ಬಳಿಕ ಅತೀ ಹೆಚ್ಚು ವಿಕೆಟ್ ಪಡೆದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅನಿಲ್ ಕುಂಬ್ಳೆ. ಒಂದು ಟೆಸ್ಟ್ ಇನಿಂಗ್ಸ್ ನಲ್ಲಿನ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆದ ವಿಶ್ವದ ಎರಡೇ ಬೌಲರ್ ಗಳಲ್ಲಿ ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡ್ ನ ಜಿಂ ಲೇಕರ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next