ನಿರ್ದೇಶಕ ಪ್ರಶಾಂತ್ ನೀಲ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಕನ್ನಡದ ಕಂಪನ್ನ ವಿದೇಶ ಮಟ್ಟಚಲ್ಲಿ ಪಸರಿಸಿದ ಖ್ಯಾತಿ ಪ್ರಶಾಂತ್ ನೀಲ್ ಗೆ ಸಲ್ಲುತ್ತದೆ.
ಇಂದು ಕೆಜಿಎಫ್ ಸಾರಥಿಯ ಹುಟ್ಟುಹಬ್ಬವಿದ್ದು, ರಾತ್ರಿ 12 ಗಂಟೆಯಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಪ್ರಶಾಂತ್ ನೀಲ್ ಹುಟ್ಟುಹಬ್ಬವನ್ನ ರಾತ್ರಿಯಿಂದಲೇ ಸೆಲಬ್ರೇಟ್ ಮಾಡಿದ್ದಾರೆ. ವಿಶೇಷ ಅಂದ್ರೆ ಸಲಾರ್ ನಿರ್ದೇಶಕರನ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲಂಸ್ ಒಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ಸ್ಪೆಷಲ್ ಸರ್ ಪ್ರೈಸ್ ಕೊಟ್ಟಿದೆ.
ನೀಲ್ ಹುಟ್ಟುಹಬ್ಬಕ್ಕೆ ವಿಡಿಯೋವೊಂದು ಸಿದ್ಧ ಮಾಡಲಾಗಿದೆ. ಪ್ರಶಾಂತ್ ನೀಲ್ ಆಲೋಚನೆ, ಕೆಲಸ, ಸಿನಿಮಾ ಮೇಕಿಂಗ್, ಇವೆಲ್ಲದರ ಬಗ್ಗೆ ಯಶ್ ಕೆಜಿಎಫ್ ಸಿನಿಮಾದ ಪ್ರೊಮೋಷನ್ಸ್ ಸಂದರ್ಭದಲ್ಲಿ ಮಾತನಾಡಿದ ಆಡಿಯೋವನ್ನು ಹಾಕಿ ವಿಡಿಯೋ ತಯಾರಿಸಲಾಗಿದೆ.