Advertisement

Hanur; ಕಾವೇರಿ ವನ್ಯಜೀವಿ ವಲಯದ ಅರಣ್ಯದಲ್ಲಿ ಅಪರೂಪದ ಬಿಳಿ ಕಡವೆ ಪತ್ತೆ

09:07 PM Sep 06, 2023 | Team Udayavani |

ಹನೂರು: ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಅಪರೂಪದ ಬಿಳಿ ಕಡವೆ ಪತ್ತೆಯಾಗಿರುವುದು ವನ್ಯಜೀವಿ ತಜ್ಞರು ಅಳವಡಿಸಿರುವ ಕೆಮರಾದಲ್ಲಿ ಟ್ರ್ಯಾಪ್ ಆಗಿದೆ.

Advertisement

ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಚಿರತೆಯ ಬಗ್ಗೆ ಅಧ್ಯಯನ ಮಾಡಲು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತು ತಂಡದವರು ಕೆಮರಾಗಳನ್ನು ಅಳವಡಿಸಿದ್ದರು. ಈ ಕೆಮರಾಗಳಲ್ಲಿ ಬಿಳಿ ಕಡವೆಯ ಚಲನ-ವಲನ ಟ್ರ್ಯಾಪ್ ಆಗಿದೆ.

ಈ ಹಿಂದೆಯೂ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಹಲವಾರು ವಿಶೇಷ ಪ್ರಾಣಿಗಳು ಕಂಡುಬಂದಿದ್ದವು. ಈ ಹಿಂದೆ 2014ರಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬಿಳಿ ಕಡವೆ ಪತ್ತೆಯಾಗಿತ್ತು. ಅದಾದ ಬಳಿಕ ಇದೀಗ ಕಾವೇರಿ ವನ್ಯಜೀವಿ ವಲಯದಲ್ಲಿ ಕಂಡುಬಂದಿದೆ. ಈ ಅರಣ್ಯ ಪ್ರದೇಶದಲ್ಲಿ ಹಿಂದೆ ಕೆನ್ನಾಯಿ ಕೂಡ ಕಂಡುಬಂದಿತ್ತು. ಅಲ್ಲದೆ ಇದೇ ಅರಣ್ಯದಲ್ಲಿ ಬಿಳಿನವಿಲು ಕೂಡ ಇರುವುದನ್ನು ಅರಣ್ಯ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಒಟ್ಟಾರೆ ಹಲವಾರು ವಿಶೇಷ ಪ್ರಾಣಿಗಳು ಕಂಡುಬರುತ್ತಿರುವುದು ವನ್ಯಜೀವಿ ತಜ್ಞರ ಸಂತಸಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next