Advertisement

ಕೀಳು ಮಟ್ಟದ ರಾಜಕಾರಣ ಮಾಡುವುದನ್ನು ಗಣೇಶ್ ಬಿಡಲಿ: ಹನುಮಂತಪ್ಪ

02:44 PM Jan 26, 2023 | Team Udayavani |

ಕುರುಗೋಡು: ಕೇವಲ ವೈಯಕ್ತಿಕ ಪ್ರತಿಷ್ಟೆಗಾಗಿ ಶಾಸಕ ಗಣೇಶ ಮತ್ತೊಮ್ಮೆ ಕುರುಗೋಡು ಸರ್ಕಾರಿ ನೂರು ಹಾಸಿಗೆಯ ಆಸ್ಪತ್ರೆ ನಿರ್ಮಾಣದ ಶಂಕುಸ್ಥಾಪನೆಗೆ ಮುಂದಾಗಿರುವುದು ತಪ್ಪು. ಇಂತಹ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ಬಿಡಲಿ. ಇಲ್ಲದಿದಲ್ಲಿ ಮುಂದಿನ ದಿನದಲ್ಲಿ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಪಕ್ಷದ ಕಂಪ್ಲಿ ಕ್ಷೇತ್ರ ಎಸ್ಸಿ ಮೋರ್ಚ ಅಧ್ಯಕ್ಷ ಸಿ.ಆರ್.ಹನುಮಂತ ಅವರು ಗಂಭೀರವಾಗಿ ಆರೋಪ ಮಾಡಿದರು.

Advertisement

ಪಟ್ಟಣದಲ್ಲಿರುವ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಅವರ ತುಂಗಾ ನಿಲಯದಲ್ಲಿ ಕಂಪ್ಲಿ ಮಂಡಲ, ಕಂಪ್ಲಿ ಕ್ಷೇತ್ರ ಎಸ್ಸಿ ಮೋರ್ಚ ಹಾಗೂ ವಿವಿಧ ಮೋರ್ಚ ಸೇರಿದಂತೆ ಬಿಜೆಪಿ ಮುಖಂಡರು ಇಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಬಳ್ಳಾರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ಕುರುಗೋಡಿನ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ, ಈಗ ಶಾಸಕ ಗಣೇಶ್ ತಮ್ಮ ಪ್ರತಿಷ್ಠೆ ಹಾಗೂ ಕಮಿಷನ್ಗಾಗಿ ಮತ್ತೊಮ್ಮೆ ಕುರುಗೋಡಿನಲ್ಲಿ ಜ.27ರಂದು ಕರಪತ್ರ ಹಾಕಿಸಿ, ಶಿಷ್ಟಾಚಾರ ಉಲ್ಲಂಘನೆಯೊಂದಿಗೆ ಆಸ್ಪತ್ರೆಗೆ ಅಡಿಗಲ್ಲು ಪೂಜೆ ಮಾಡಲು ಮುಂದಾಗಿರುವುದು ದುರ್ಧೈವವಾಗಿದೆ. ಕಮಿಷನ್ ಗಾಗಿ ಮತ್ತೊಮ್ಮೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸುವ ಜತೆಗೆ ಮತ್ತೊಮ್ಮೆ ಶಾಸಕ ಗಣೇಶ್ ಭೂಮಿ ಪೂಜೆ  ಮಾಡಲು ಮುದ್ರಣ ಮಾಡಿರುವ ಪತ್ರಿಕೆಯಲ್ಲಿ ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರ ಹೆಸರಿಲ್ಲ.ಯಾವುದೇ ಸಂಬಂಧ ಪಟ್ಟ ಇಲಾಖೆ ಗಳ ಅಧಿಕಾರಿಗಳು ಜಿಲ್ಲಾಡಳಿತದ ಹೆಸರು ಸೇರ್ಪಡೆ ಮಾಡಿಲ್ಲ .ಇದು ಶಾಸಕರ ತಮ್ಮ ಮನೆಯ ವೈಯಕ್ತಿಕ ಅಭಿವೃದ್ಧಿ ಕೆಲಸವಾಗಿದೆಯೇ ಅಥವಾ ಸರ್ಕಾರಿ ಕೆಲಸವೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಎಂದು ಗುಡುಗಿದರು.

ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವಿರೇಶ್   ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ‌100ಹಾಸಿಗೆ ಆಸ್ಪತ್ರೆ  ಬಳ್ಳಾರಿ ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉಸ್ತುವಾರಿ ಸಚಿವರಾದ ಶ್ರೀ ರಾಮುಲು ಹಾಗೂ ಇನ್ನಿತರ ಶಾಸಕರು ಮತ್ತು ವಿಶೇಷವಾಗಿ ಕಂಪ್ಲಿ ಕ್ಷೇತ್ರದ ಶಾಸಕರಾದ ಜೆ.ಎನ್ ಗಣೇಶ ಅವರು ಪ್ರಮುಖರಾಗಿದ್ದು ಅದ್ದೂರಿಯಾಗಿ ಭೂಮಿ ಪೂಜೆ ನೆರವೇರಿಸಿದೆ. ಆದರೂ ಕುರುಗೋಡು ಪಟ್ಟಣದಲ್ಲಿ ಮತ್ತೋಮ್ಮೆ ಇದೆ ಜನವರಿ 27ನೇ ತಾರೀಕು ಶಂಕುಸ್ಥಾಪನೆ ಮಾಡುತ್ತಿರುವುದು ಯಾವ ನೈತಿಕತೆ ಇದೆ.  ಅಭಿವೃಧಿ ಮಾಡಲು ಆಗದಿದ್ದಾಗ ಸುರೇಶ್ ಬಾಬು ಮತ್ತು ಅವರ ಮಾವ ಶ್ರೀ ರಾಮುಲು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ನಿಮಗೆ ಘನತೆ ತರುವಂತಹ ವಿಷಯವೇ ಗಣೇಶರವರೇ  ಎಂದು ಪ್ರೇಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ನರಸಪ್ಪ ಯಾದವ್, ಕಂಪ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಕೆ. ಸುನಿಲ್, ಸುಧಾಕರ್, ಎಸ್ಟಿ ಮೋರ್ಚಾ ಅಧ್ಯಕ್ಷ ಕೋಮರೆಪ್ಪ, ಒಬಿಸಿ ಅಧ್ಯಕ್ಷ ನರಸಪ್ಪ ಯಾದವ್, ಶಕ್ತಿ ಕೇಂದ್ರದ ಅಧ್ಯಕ್ಷ ರಾಜಣ್ಣ, ಯುವ ಘಟಕ ಅಧ್ಯಕ್ಷ ಎಸ್.ನಟರಾಜ್ ಗೌಡ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮೇಲಗಿರಿ, ಮುಖಂಡರಾದ ವಿರೂಪಾಕ್ಷಗೌಡ ಕೆ, ಪ್ರೇಮ್ ಕುಮಾರ್, ವಿಜಯರೆಡ್ಧಿ, ಬಸವರಾಜ್ ಗೌಡ, ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಎನ್.ಪುರುಷೋತ್ತಮ ಸೇರಿದಂತೆ ಬಿಜೆಪಿ ಪಕ್ಷದ ಕಂಪ್ಲಿ ಮತ್ತು ಕುರುಗೋಡು ಕಾರ್ಯಕರ್ತರು  ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next