ಮುಂಬಯಿ: ಕಳೆದ 70 ವರ್ಷಗಳಿಂದ ಗುರು-ಹಿರಿಯರು ಆಚರಿಸಿಕೊಂಡು ಬಂದಂತ ಹನುಮಾನ್ ಮಂದಿರದಲ್ಲಿ ಶ್ರೀಧರ್ ಜೆ. ಪೂಜಾರಿ ಅವರು ಕೆಲವು ವರ್ಷಗಳಿಂದ ಎಲ್ಲ ಭಕ್ತಾದಿಗಳನ್ನು ಒಗ್ಗೂಡಿಕೊಂಡು ತನ್ನ ನೇತೃತ್ವದಲ್ಲಿ ಎ. 19ರಂದು ಹುಮಾನ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಮಧ್ಯಾಹ್ನ 12ರಿಂದ ಹನುಮಾನ್ ಮೂರ್ತಿಗೆ ಸೀಯಾಳ, ತುಪ್ಪ, ಹಾಲಿನ ಅಭಿಷೇಕವು ಪುರೋಹಿತ ರಾದ ಶ್ರೀನಿವಾಸ ಜೋಯಿಸ ಅವರಿಂದ ನಡೆಯಿತು. ಸಂಜೆ 4ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ರಾತ್ರಿ 7ರಿಂದ ಮರಾಠಿ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಕಾರ್ಯಕರ್ತರಾದ ನಾಗೇಶ್ ಸುವರ್ಣ, ರಮೇಶ್ ಪೂಜಾರಿ, ಜಯರಾಮ್ ಶೆಟ್ಟಿ, ರವಿ ಕೋಟ್ಯಾನ್, ಜನಾರ್ದನ ಸಾಲ್ಯಾನ್, ರವಿ ನಾಯ್ಕ, ಹರೀಶ್ ಕುಮಾರ್ ಕೋಟ್ಯಾನ್, ನರಸಿಂಹ ಸಾಲ್ಯಾನ್, ರಾಜೇಶ್ ಎಸ್. ಪೂಜಾರಿ, ಶಂಕರ್ ಬಂಗೇರ, ನಳಿನಾಕ್ಷೀ ಎಚ್. ಕೋಟ್ಯಾನ್, ರಜನಿ ಪೂಜಾರಿ, ರೇಖಾ, ಆಶಾ, ಉಷಾ, ಪ್ರಸಾದ್, ಜಯಶ್ರೀ, ಭೋಜ ಪೂಜಾರಿ, ಸುಲೋಚನಾ ಬಂಗೇರ, ಕೇಶರಿ ಅಮೀನ್, ಗೀತಾ ದೇವಾಡಿಗ, ಲತಾ ಎಸ್. ಪೂಜಾರಿ, ಪುಷ್ಪಾ ಅಂಚನ್, ರಜನಿ ಅರ್. ಕೋಟ್ಯಾನ್, ಶೋಭಾ ಸಾಲ್ಯಾನ್, ರೇವತಿ ಶೆಟ್ಟಿ, ಸರಸ್ವತಿ ಪೂಜಾರಿ, ಶಾರದಾ ಸಾಲ್ಯಾನ್, ಸರಸ್ವತಿ ಅಮೀನ್ ಅವರಿಂದ ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂಭ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಧರ್ ಜೆ.
ಪೂಜಾರಿ ಮತ್ತು ಶಾರದಾ ಪೂಜಾರಿ ದಂಪತಿಯನ್ನು ಗೌರವಿಸ
ಲಾಯಿತು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್
ಕೆ. ಹೆಜಾ¾ಡಿ, ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಹಾಗೂ ಮಾಜಿ ಕಾರ್ಯಾಧ್ಯಕ್ಷ ಭೋಜ ಸಿ. ಪೂಜಾರಿ ಅವರನ್ನು ಪೂಜೆಯ ಅರ್ಚಕರಾದ ರಮೇಶ್ ಪೂಜಾರಿ ಅವರು ಗೌರವಿಸಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಪ್ರಾರ್ಥನೆಗೈದು ಪ್ರಸಾದ ವಿತರಿಸಿದರು.