Advertisement

Koppal: ರಾಮನ ಶಿಲೆಯಲ್ಲೇ ಹನುಮನ ಮೂರ್ತಿ!

01:09 AM Jan 11, 2024 | Team Udayavani |

ಕೊಪ್ಪಳ: ಅಯೋಧ್ಯೆ ರಾಮನ ಮೂರ್ತಿಯ ನಿರ್ಮಾಣದಲ್ಲಿ ಉಳಿದಿರುವ ತುಂಡು ಶಿಲೆಯಲ್ಲಿಯೇ ಹನುಮನ ಮೂರ್ತಿ ಸಿದ್ಧಗೊಳ್ಳಲಿದೆ!

Advertisement

ಅಯೋಧ್ಯೆಯ ರಾಮ ಮಂದಿರದ ಉದ್ಘಾಟ ನೆಗೆ ದಿನಗಣನೆ ಶುರುವಾದ ಬೆನ್ನಲ್ಲೇ ಇನ್ನೊಂದು ಅಚ್ಚರಿಯ ಸಂಗತಿ ಬೆಳಕಿದೆ ಬಂದಿದೆ. ಮೈಸೂರಿ ನಿಂದ ಅಯೋಧ್ಯೆಗೆ ರಾಮನ ಮೂರ್ತಿ ಕೆತ್ತನೆಗೆ ತೆಗೆದುಕೊಂಡು ಹೋದ ಶಿಲೆಯ ಇನ್ನುಳಿದ ಭಾಗದಲ್ಲಿ ರಾಮನ ಬಂಟ ಹನುಮನ ಶಿಲೆ ಕೆತ್ತಲು ಕೊಪ್ಪಳದ ಶಿಲ್ಪಿ ಪ್ರಕಾಶ ಸಿದ್ಧತೆ ನಡೆಸಿದ್ದಾರೆ.

ಕೊಪ್ಪಳದ ಶಿಲ್ಪಿ ಪ್ರಕಾಶ ಆಂಜಿನೇಯ ಮೂರ್ತಿ ಕೆತ್ತನೆಯಲ್ಲಿ ಪರಿಣತರು. 2022, ಡಿ.6ರಂದು ಮೈಸೂರಿಗೆ ತೆರಳಿ ಶಿಲೆ ಮಾರಾಟಗಾರ ಶ್ರೀನಿವಾಸ ಅವರ ಬಳಿ ವಿಜಯದಾಸರ ಮೂರ್ತಿ ಕೆತ್ತನೆಗೆ ಕೃಷ್ಣ ಶಿಲೆಯೊಂದನ್ನು ಗುರುತು ಮಾಡಿದ್ದರು. ಆದರೆ ವಿಜಯದಾಸರ ಮೂರ್ತಿ ಕೆತ್ತನೆಗೆ ಅದು ಅಳತೆ ಬಾರದ ಹಿನ್ನೆಲೆಯಲ್ಲಿ ವಾಪಸ್‌ ಬಂದಿದ್ದರು. ಈಗ ಅದೇ ಶಿಲೆ ಶ್ರೀರಾಮನ ಮೂರ್ತಿಯಾಗಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೊಳ್ಳುತ್ತಿದೆ.

ಪ್ರಕಾಶ ಅವರು ಮೊದಲು ಗುರುತಿಸಿದ ಶಿಲೆ ಯಲ್ಲಿ ರಾಮ ಅರಳಲಿದ್ದಾನೆ ಎಂಬುದನ್ನು ಅರಿತ ಬಳಿಕ ಆ ಶಿಲೆಯಲ್ಲಿ ಉಳಿದ್ದ ತುಂಡನ್ನು ಕಾಯ್ದಿರಿ ಸುವಂತೆ ಶೀನಿವಾಸ ಅವರಿಗೆ ಮನವಿ ಮಾಡಿ ದ್ದಾರೆ. ಅದೇ ಶಿಲೆಯಲ್ಲೇ ಆಂಜನೇಯನ ಮೂರ್ತಿ ಸಿದ್ಧಗೊಳಿಸಲು ಪ್ರಕಾಶ ಶಿಲ್ಪಿ ಸಜ್ಜಾಗಿದ್ದು, ಕೊಪ್ಪಳದ ಸುಬ್ಬಣ್ಣಾಚಾರ್‌ ಮಠದಲ್ಲಿಯೇ ಪ್ರತಿಷ್ಠಾಪನೆಗೆ ಯೋಚಿಸಿದ್ದಾರೆ.

6141 ಆಂಜನೇಯ ಮೂರ್ತಿ ಕೆತ್ತನೆ: ಪ್ರಕಾಶ ಮೂಲತಃ ಶಿಲ್ಪಿಕಾರರು. ಪ್ರತಿನಿತ್ಯ ಒಂದೊಂದು ಚಿಕ್ಕ ಆಂಜನೇಯ ಮೂರ್ತಿ ಕೆತ್ತನೆ ಮಾಡುತ್ತಾರೆ. ತಂದೆಯ ಸಂಕಲ್ಪದಂತೆ 2007ರ ಜ.26ರಿಂದಲೂ ಕೆತ್ತನೆ ಕಾಯಕ ಮಾಡುತ್ತಿದ್ದಾರೆ.

Advertisement

ಇದುವರೆಗೆ 6141 ಆಂಜನೇಯ ಮೂರ್ತಿಗಳನ್ನು ಕೆತ್ತನೆ ಮಾಡಿದ್ದು ಅವೆಲ್ಲ ಇವರ ಮನೆಯಲ್ಲೇ ಇವೆ!

ಮೈಸೂರಿಗೆ ತೆರಳಿದ ವೇಳೆ ಕೃಷ್ಣ ಶಿಲೆ ಗಮನಿಸಿದ್ದೆ. ಆದರೆ ನಮಗೆ ವಿಜಯ ದಾಸರ ಮೂರ್ತಿಗೆ ಅಳತೆ ಕಡಿಮೆಯಾದ ಕಾರಣ ವಾಪಸ್ಸಾಗಿದ್ದೆವು. ಆ ಮೇಲೆ ನಾನು ಗುರುತು ಮಾಡಿದ ಶಿಲೆಯೇ ಅಯೋಧ್ಯೆ ಶ್ರೀರಾಮ ಮೂರ್ತಿ ಕೆತ್ತನೆಗೆ ಬಳಕೆಯಾಗಿರುವುದು ಕೇಳಿ ಖುಷಿಯಾಯಿತು. ಆ ಶಿಲೆಯಲ್ಲಿ ಉಳಿದ ತುಂಡು ಬಿಡಿ ಭಾಗವನ್ನು ಮಾರಾಟಗಾರರಿಂದ ಕೇಳಿದ್ದೇವೆ. ಉಳಿದ ತುಂಡು ಶಿಲೆಯಲ್ಲಿ ಆಂಜನೇಯ ಮೂರ್ತಿಯನ್ನು ಕೆತ್ತಲಿದ್ದೇವೆ.
ಪ್ರಕಾಶ ಶಿಲ್ಪಿ, ಕೊಪ್ಪಳದ ಶಿಲ್ಪಿಕಾರ

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮನ ಮೂರ್ತಿಯ ಶಿಲೆಯನ್ನು ಮೊದಲು ಗುರುತಿಸಿದ್ದು ಕೊಪ್ಪಳದ ಪ್ರಕಾಶ ಶಿಲ್ಪಿ ಅವರು. ಆದರೆ ಅವರಿಗೆ ಅಳತೆ ಬಾರದ ಕಾರಣ ವಾಪಸ್‌ ಆಗಿದ್ದರು. ಈಗ ಶ್ರೀರಾಮನ ಮೂರ್ತಿಗೆ ಬೇಕಾದ ಶಿಲೆಯನ್ನು ಅಯೋಧ್ಯೆಗೆ ಕಳುಹಿಸಿದ್ದೇವೆ. ಉಳಿದ ಭಾಗವನ್ನು ಪ್ರಕಾಶ ಶಿಲ್ಪಿ ಅವರಿಗೆ ಕಾಯ್ದರಿಸಿದ್ದೇವೆ.
ಶ್ರೀನಿವಾಸ, ಶಿಲೆ ಮಾರಾಟಗಾರರು

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next