Advertisement
ಯಾರು ಈ ಹನುಮ ವಿಹಾರಿ?19 ಹರೆಯದ ಹನುಮ ವಿಹಾರಿ ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಆಟಗಾರ. ಬಲಗೈ ಬ್ಯಾಟ್ಸ್ಮನ್ ಆಗಿರುವ ವಿಹಾರಿ ಬಲಗೈ ಆಫ್ ಸ್ಪಿನ್ನರ್ ಕೂಡಾ. 2012ರಲ್ಲಿ ನಡೆದ ಅಂಡರ್ 19 ಪಂದ್ಯಾವಳಿಯಲ್ಲಿ ಉನ್ಮುಕ್ತ್ ಚಾಂದ್ ನಾಯಕತ್ವದಡಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2010- 2016 ವರೆಗೆ ಹೈದರಾಬಾದ್ ಪರವಾಗಿ ಆಡಿದ್ದ ಹನುಮ ವಿಹಾರಿ, ಸದ್ಯ ಆಂಧ್ರ ಪ್ರದೇಶ ತಂಡದಲ್ಲಿ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ಸನ್‌ರೈಸರ್ ಹೈದರಾಬಾದ್ ತಂಡದ ತಮ್ಮ ಛಾಪು ಮೂಡಿಸಿದ್ದರು.
19 ವರ್ಷದ ನಂತರ ಇಂಡಿಯಾ ತಂಡದಲ್ಲಿ ಆಂದ್ರ ಆಟಗಾರ
ಸದ್ಯ ಟೀಂ ಇಂಡಿಯಾ ಆಯ್ಕೆಗಾರ ಎಂ.ಎಸ್.ಕೆ. ಪ್ರಸಾದ್ ನಂತರ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಮೊದಲ ಆಂಧ್ರ ಆಟಗಾರ ಈ ಹನುಮ ವಿಹಾರಿ. ಎಂ.ಎಸ್.ಕೆ. ಪ್ರಸಾದ್ ಸುಮಾರು 19 ವರ್ಷಗಳ ಹಿಂದೆ ಅಂದರೆ 1999ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಹನುಮ ಸಾಧನೆ
ಪ್ರಥಮ ದರ್ಜೆ ಪಂದ್ಯಾವಳಿಯಲ್ಲಿ 63 ಪಂದ್ಯಗಳಲ್ಲಿ 59.79ರ ಸರಾಸರಿಯಲ್ಲಿ 5142 ರನ್ ಗಳಿಸಿರುವ ವಿಹಾರಿ, 15 ಶತಕ ಮತ್ತು 24 ಅರ್ಧ ಶತಕ ಬಾರಿಸಿದ್ದಾರೆ. ಆಫ್ ಸ್ಪಿನ್ನರ್ ಆಗಿರುವ ಹನುಮ ವಿಹಾರಿ19 ವಿಕೆಟ್ ಕೂಡಾ ಪಡೆದಿದ್ದಾರೆ. ಲಿಸ್ಟ್ ಎ ಕ್ರಿಕೆಟ್ ನಲ್ಲಿ 56 ಪಂದ್ಯದಲ್ಲಿ 2268 ರನ್ ಗಳಿಸಿರುವ ಹನುಮ ವಿಹಾರಿ 47.25 ಸರಾಸರಿ ಹೊಂದಿದ್ದಾರೆ. 12 ವಿಕೆಟ್ ಕೂಡಾ ಕಬಳಿಸಿರುವ ವಿಹಾರಿ ಹೆಚ್ಚಾಗಿ ಬ್ಯಾಟಿಂಗ್ ಆಲ್ ರೌಂಡರ್ ರೂಪದಲ್ಲಿ ಕಾಣಿಸುತ್ತಾರೆ.
ಕಳೆದ ಸಾಲಿನ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ ಆಂಧ್ರ ಬ್ಯಾಟ್ಸ್ ಮನ್ ಆರು ಪಂದ್ಯಗಳಿಂದ 752 ರನ್ ಕಲೆ ಹಾಕಿದ್ದರು. ಒರಿಸ್ಸಾ ವಿರುದ್ದದ ಅಜೇಯ 302 ರನ್ ವಿಹಾರಿ ಒಬ್ಬ ದೊಡ್ಡ ಇನ್ನಿಂಗ್ಸ್ ಆಟಗಾರ ಎಂದು ನಿರೂಪಿಸಿದ್ದರು. ಇರಾನಿ ಟ್ರೋಫಿಯಲ್ಲಿ ರಣಜಿ ಚಾಂಪಿಯನ್ ವಿದರ್ಭ ವಿರುದ್ದ ಶೇಷ ಭಾರತದ ಪರವಾಗಿ183 ರನ್ ಗಳಿಸಿ ಆಯ್ಕೆಗಾರರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.
ಸದ್ಯ ಭಾರತ ಎ ತಂಡದ ಪರವಾಗಿ ಉತ್ತಮ ಪ್ರದರ್ಶನ ನಿಡುತ್ತಿರುವ ಹನುಮ ವಿಹಾರಿ ಭಾರತ ಟೆಸ್ಟ್ ತಂಡದ ಕದ ತಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ದದ ನಾಲ್ಕನೇ ಪಂದ್ಯದಲ್ಲಿ ಗಾಯಾಳಾಗಿರುವ ರವಿಚಂದ್ರನ್ ಅಶ್ವಿನ್ ತಂಡದಿಂದ ಹೊರ ಬಿದ್ದಲ್ಲಿ ಹನುಮ ವಿಹಾರಿ ಭಾರತದ 292ನೇ ಆಟಗಾರನಾಗಿ ಟೆಸ್ಟ್ ಕ್ಯಾಪ್ ಧರಿಸುವ ಕಾತರದಲ್ಲಿದ್ದಾರೆ.