ಹುಬ್ಬಳ್ಳಿ: ನಗರದ ವಿವಿಧ ಪ್ರದೇಶಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ವಾಯುಪುತ್ರ ಹನುಮ ಜಯಂತಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ಹಳೇಹುಬ್ಬಳ್ಳಿಯ ಇಂಡಿಪಂಪ್ ಬಳಿ, ಅಯೋಧ್ಯಾನಗರ, ಚನ್ನಪೇಟೆ, ದಿಡ್ಡಿ ಓಣಿ, ಕಸಬಾಪೇಟೆ, ಯಲ್ಲಾಪುರ ಓಣಿ, ಮರಾಠಾ ಗಲ್ಲಿ, ಬ್ರಾಡವೇ, ವೀರಾಪುರ ರಸ್ತೆಯ ಚೋಳಿನವರ ಓಣಿ, ಸೆಟ್ಲಮೆಂಟ್, ಬಂಕಾಪುರ ಚೌಕ್, ಎಂಜಿ ಮಾರ್ಕೆಟ್, ನಾಗಶೆಟ್ಟಿಕೊಪ್ಪ, ಬೆಂಗೇರಿ,
ಹೊಸೂರ, ಅಶೋಕನಗರ, ಆದರ್ಶನಗರ, ಗೋಕುಲ ರಸ್ತೆ ಶಿವಗಿರಿ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳ ಮಾರುತಿ ದೇವಸ್ಥಾನಗಳಲ್ಲಿ ಆಂಜನೇಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ತೊಟ್ಟಿಧಿ ಲೋತ್ಸವ, ಮಹಾಮಂಗಳಾರತಿ ನೆರವೇರಿಸಲಾಯಿತು.
ಕಸಬಾಪೇಟೆ ಮುದಿ ಹನುಮಪ್ಪ ದೇವಸ್ಥಾನದಲ್ಲಿ ಹೋಮ-ಹವನ ಮಾಡಲಾಯಿತು. ಗದಗ ರಸ್ತೆ ಒಂಟಿ ಹನುಮಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.ನಗರದ ವಿವಿಧ ಆಂಜನೇಯ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತು.
ಹನುಮನ ಜಾತ್ರೋತ್ಸವ
ಕೇಶ್ವಾಪುರ ನಾಗಶೆಟ್ಟಿಕೊಪ್ಪದ ಮಾರುತಿ ದೇವಸ್ಥಾನದಲ್ಲಿ ಹಾಗೂ ಹೊಸೂರು ಹನುಮಂತ ದೇವರ ದೇವಸ್ಥಾನದಲ್ಲಿ ಹಾಗೂ ಬಂಕಾಪುರ ಚೌಕ್‌ನ ಮಾರುತಿ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೋತ್ಸವ ನೆರವೇರಿತು.