Advertisement

ಬಿಗಿಭದ್ರತೆಯಲ್ಲಿ ನಡೆದ ಹನುಮ ಜಯಂತಿ: ಪ.ಬಂಗಾಲ, ಬಿಹಾರದಲ್ಲಿ ಅರೆ ಸೇನಾಪಡೆ

01:31 AM Apr 07, 2023 | Team Udayavani |

ಹೊಸದಿಲ್ಲಿ: ಗುರುವಾರ ದೇಶದಲ್ಲಿ ಹನುಮ ಜಯಂತಿಯು ಪೊಲೀಸ್‌ ಬಿಗಿಭದ್ರತೆಯಲ್ಲಿ ನಡೆದಿದೆ. ಎಲ್ಲ ರಾಜ್ಯ ಸರಕಾರಗಳಿಗೂ ಕೇಂದ್ರ ಸರಕಾರ ಸೂಕ್ತ ಬಂದೋಬಸ್ತ್ ಮಾಡು   ವಂತೆ ಮುನ್ನವೇ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿ ಸಹಿತ ಹಲವೆಡೆ ಬಿಗುವಿನ ಪರಿಸ್ಥಿತಿ ಯಲ್ಲೇ ಜಯಂತಿ ನೆರವೇರಿದೆ.

Advertisement

ಪಶ್ಚಿಮ ಬಂಗಾಲ ಹಾಗೂ ಬಿಹಾರದಲ್ಲಿ ರಾಮನವಮಿ ವೇಳೆ ಭಾರೀ ಹಿಂಸಾಚಾರಗಳು ನಡೆದಿದ್ದವು. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ದಿಲ್ಲಿ ಮತ್ತು ಪಶ್ಚಿಮ ಬಂಗಾಲದ ಹಲವು ಸೂಕ್ಷ್ಮಪ್ರದೇಶಗಳಲ್ಲಿ ಪೊಲೀಸರ ಜತೆಗೆ ಅರೆ ಸೈನಿಕಪಡೆಗಳನ್ನು ನಿಯೋಜಿಸಲಾಗಿತ್ತು. ದಿಲ್ಲಿಯ ಜಹಂಗೀರ್‌ಪುರಿಯಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಸಂಘಟನೆಗಳು ಪೊಲೀಸರ ಸರ್ಪಗಾ ವಲಿನಲ್ಲೇ ಹನುಮ ಜಯಂತಿಯ ಬೃಹತ್‌ ಶೋಭಾಯಾತ್ರೆ ನಡೆಸಿವೆ.

ಶೋಭಯಾತ್ರೆಗೆ ಮೊದಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಬಳಿಕ ವಿಎಚ್‌ಪಿ ಶೋಭಾಯಾತ್ರೆ ನಡೆಸಲೇಬೇಕೆಂದು ಪಟ್ಟು ಹಿಡಿದ ಕಾರಣ ಹೆಚ್ಚಿನ ಭದ್ರತೆ ಒದಗಿಸಿ ಯಾತ್ರೆ ನಡೆಸಲಾಗಿದೆ. “ಸಂಘಟಕರೊಂದಿಗೆ ಸಮಾಲೋಚಿಸಿ ಸುರಕ್ಷಿತ ಆಚರಣೆ ಖಾತರಿ ಪಡಿಸಿಕೊಂಡಿದ್ದೇವೆ. ಸ್ಥಳೀಯ ಪೊಲೀಸರ ತಂಡದ ಜತೆಗೆ 4 ಅರೆಸೈನಿಕ ಪಡೆ ತುಕಡಿಗಳನ್ನು ಭದ್ರತೆ ಗಾಗಿ ನಿಯೋಜಿಸಲಾಗಿದೆ’ಎಂದು ದಿಲ್ಲಿ ವಾಯವ್ಯ ಭಾಗದ ಡಿಸಿಪಿ ಜಿತೇಂದ್ರ ಮೀನಾ ಹೇಳಿದ್ದಾರೆ. ದಿಲ್ಲಿ ಸಿಎಂ ಅರ ವಿಂದ್‌ ಕೇಜ್ರಿವಾಲ್‌ ಕೂಡ ದೇವಸ್ಥಾನಕ್ಕೆ ತೆರಳಿ ಹನುಮಂತನಿಗೆ ಪೂಜೆ ಸಲ್ಲಿಸಿದ್ದಾರೆ.

ಪ.ಬಂಗಾಲ ಪರಿಸ್ಥಿತಿ ನಿಯಂತ್ರಣ: ರಾಮ ನವಮಿ ಆಚರಣೆ ವೇಳೆ ತೀವ್ರ ಗಲಭೆಗಳಾಗಿದ್ದ ಪಶ್ಚಿಮ ಬಂಗಾಲದಲ್ಲಿಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಬ್ಯಾರಕ್‌ಪುರ್‌, ರಿಶ್ರಾ ಹಾಗೂ ಕೋಲ್ಕತಾದ ಪಾರ್ಕ್‌ ಸರ್ಕಸ್‌, ಜೊರಾ ಸಾಂಕೋ ಸಹಿತ ವಿವಿಧ ಪ್ರದೇಶ ಗಳಲ್ಲಿಯೂ ಭದ್ರತಾಪಡೆಗಳನ್ನು ನಿಯೋ ಜಿಸಲಾಗಿದ್ದು, ಈ ಎಲ್ಲ ಪ್ರದೇಶಗಳಲ್ಲಿಯೂ ಶಾಂತಿಯುತವಾಗಿ ಹನುಮ ಜಯಂತಿ ನಡೆಸಲಾಗಿದೆ. ಮೆರವಣಿಗೆ ಸಂದರ್ಭಗಳಲ್ಲಿ ಘಟಿಸಬಹುದಾಗಿದ್ದ ಅಹಿತಕರ ಚಟುವಟಿ ಕೆಗಳನ್ನು ತಪ್ಪಿಸಲು ಹಾಗೂ ಕಣ್ಗಾವಲಿಗಾಗಿ ಡ್ರೋನ್‌ಗಳನ್ನು ಬಳಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next