Advertisement

ಆಂಜನೇಯ ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ ಪಿ. ಐ.ಉದಯ ರವಿ

12:52 PM Apr 09, 2022 | Team Udayavani |

ಗಂಗಾವತಿ: ಆಂಜನೇಯ ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದಾನೆ ಬದುಕಿನ ಸಂಕಲ್ಪ ಈಡೇರಿಸಲು ಯುವಕರು ಆಂಜನೇಯನ ಭಕ್ತರಾಗುವಂತೆ ಗ್ರಾಮೀಣ ಪಿ.ಐ. ಉದಯ ರವಿ ಹೇಳಿದರು.

Advertisement

ಅವರು ಅಯ್ಯಪ್ಪ ಗಿರಿಯಲ್ಲಿರುವ ಸ್ವಾಮಿ ಅಯ್ಯಪ್ಪ ದೇಗುಲದಲ್ಲಿ ಶನಿವಾರ ಹನುಮ ಮಾಲಾಧಾರಿಗಳು ಏರ್ಪಡಿಸಿದ್ದ ಹನುಮ ಹೋಮದಲ್ಲಿ ಪಾಲ್ಗೊಂಡು ಮಾತನಾಡಿದರು.ಧರ್ಮ ಮತ್ತು ದೇವರನ್ನು ನಂಬಿ ಪ್ರತಿಯೊಬ್ಬರೂ ಬದುಕಬೇಕು. ಧರ್ಮದ ಹಾದಿಯಲ್ಲಿ ನಡೆಯುವ ಮೂಲಕ ಸರ್ವರಿಗೂ ಒಳಿತನ್ನು ಮಾಡಬೇಕು. ಯುವಕರು ಅಪರಾಧ ಮತ್ತು ಚಟಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆದು ಪಾಲಕರ ಕನಸು ನನಸು ಮಾಡಬೇಕು. ಹಿಂದೂ ಧರ್ಮದ ಯುವಕರ ಚೇತನ ಶಕ್ತಿಯಾಗಿರುವ ಹನುಮಂತನು ನಮ್ಮ ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಜನಿಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಯುವಕರು ಪ್ರತಿವರ್ಷ ಹನುಮ ಮಾಲಾ ಧಾರಣೆ ಮಾಡುವ ಮೂಲಕ ಹನುಮಂತನ ಆದರ್ಶಗಳನ್ನು ಜೀವನದಲ್ಲಿ ಪಾಲನೆ ಮಾಡಬೇಕು. ಹನುಮ ಮಾಲೆ ಧಾರಣೆ ಮಾಡುವುದು ಯುವಕರು ಸನ್ಮಾರ್ಗದಲ್ಲಿ ನಡೆಯಲು ಆದ್ದರಿಂದ ಕೆಟ್ಟ ಸಂಪ್ರದಾಯಗಳನ್ನು ಬಿಟ್ಟು ಒಳ್ಳೆಯ ನಂಬಿಕೆಯ ಮೂಲಕ ಆಂಜನೇಯನ ಪರಮಭಕ್ತ ರಾಗುವಂತೆ ಕರೆ ನೀಡಿದರು .

ಈ ಸಂದರ್ಭದಲ್ಲಿ 500 ಕ್ಕೂ ಹೆಚ್ಚು ಹನುಮಮಾಲಾಧಾರಿ ಯುವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next