Advertisement

ಹನುಮ ದೇಗುಲಗಳಿಗೆ ಭಕ್ತರ ದಂಡು

03:33 PM Apr 12, 2017 | Team Udayavani |

ಕಲಬುರಗಿ: ರಾಮಧೂತ ಹನುಮಂತನ ಜಯಂತ್ಯುತ್ಸವವು ದವನದ ಹುಣ್ಣಿಮೆ ದಿನವಾದ ಮಂಗಳವಾರ ನಗರದಲ್ಲಿ ಆಚರಿಸಲಾಯಿತು. ಈ ವೇಳೆ ನಗರದಲ್ಲಿನ ಹನುಮಾನ್‌ ದೇವಸ್ಥಾನಗಳಿಗೆ ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಕೋರಂಟಿ ಹನುಮಾನ ದೇವಸ್ಥಾನದಲ್ಲಿ ಭಕ್ತರ ದಂಡೇ ನೆರೆದಿತ್ತು.

Advertisement

ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಜರುಗಿದವು. ಭಕ್ತರು ಸಾಲಿನಲ್ಲಿ ನಿಂತು ಹನುಮಾನ ದೇವರ ದರ್ಶನ ಪಡೆದರು. ವಿದ್ಯಾನಗರ, ಶಕ್ತಿನಗರ, ಪ್ರಾದೇಶಿಕ ಸಾರಿಗೆ ಕಚೇರಿ ಬಳಿಯ ದೇವಸ್ಥಾನ, ಬಸವೇಶ್ವರ ಆಸ್ಪತ್ರೆ ಎದುರಿನ ಹನುಮಾನ ದೇವಸ್ಥಾನ, ಬಿದ್ದಾಪುರ ಕಾಲೋನಿಯ ದೇವಸ್ಥಾನ,

ಗಂಜ್‌ ಅಡತ್‌ ಬಜಾರ್‌, ಸಂತ್ರಸವಾಡಿ, ದರ್ಗಾ ರಸ್ತೆ, ಪೂಜಾ ಕಾಲೋನಿ, ಜಯನಗರ, ಓಂನಗರ, ರಾಮಮಂದಿರ, ಐವಾನ್‌ ಶಾಹಿ ರಸ್ತೆ, ಅಶೋಕ ನಗರ, ಜಗತ್‌ ವೃತ್ತ, ರಾಘವೇಂದ್ರ ಕಾಲೋನಿ, ಹಳೆಯ ಜೇವರ್ಗಿ ರಸ್ತೆಯ ಒಳಸೇತುವೆಯ ಬಳಿ ಮುದ್ದೆ ಹನುಮಾನ ದೇವಸ್ಥಾನ ಹಾಗೂ ಮುಂತಾದೆಡೆ ಹನುಮಾನ, ರಾಮಮಂದಿರಗಳಲ್ಲಿ ವಿಶೇಷ ಪೂಜೆ ಜರುಗಿದವು.

ದವನದ ಹುಣ್ಣಿಮೆ ದಿನದಂದು ನಾಡಿನೆಲ್ಲೆಡೆಯಂತೆ ನಗರದಲ್ಲೂ ರಥೋತ್ಸವ ನಡೆದವು. ನಗರದ ಗಂಗಾನಗರದಲ್ಲಿನ ಹನುಮಾನ ದೇವಸ್ಥಾನ, ಕೋರಂಟಿ ಹನುಮಾನ ದೇವಸ್ಥಾನದ ಆವರಣದಲ್ಲಿನ ರಥೋತ್ಸವದಲ್ಲಿ ಅಪಾರ ಭಕ್ತರು ಆಗಮಿಸಿದ್ದರು. 

ಸಂಭ್ರಮದ ಮಧ್ಯೆ ಹನುಮ ರಥೋತ್ಸವ
ಆಳಂದ:
ಪಟ್ಟಣದ ಗ್ರಾಮ ದೇವತೆ ಹನುಮಾನ್‌ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ 86ನೇ ಮಹಾರಥೋತ್ಸವ ಸಂಭ್ರಮದ ಮದ್ಯ ನೆರವೇರಿತು. ರಥೋತ್ಸವಕ್ಕೂ ಪೂರ್ವ ಪ್ರಮುಖ ರಸ್ತೆಗಳ  ಮೂಲಕ ನಡೆದ ಪಲ್ಲಕ್ಕಿ ಉತ್ಸವ ನಡೆಯಿತು. 

Advertisement

ಮಧ್ಯಾಹ್ನ ದೇವಸ್ಥಾನದಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವ ಪ್ರಮುಖ ರಸ್ತೆಗಳ ಮೂಲಕ ಸಾಗಿ ದೇವಸ್ಥಾನಕ್ಕೆ ತಲುಪಿದ ಬಳಿಕ ರಥೋತ್ಸವ ಜರುಗಿತು. ಬೆಳಗಿನ ಜಾವ ತೊಟ್ಟಿಲು ಸಮಾರಂಭ, ಸಂಜೆ ಮಹಾರಥೋತ್ಸವ ಹಾಗೂ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಜಾತ್ರೆ ಅಂಗವಾಗಿ ವಿವಿಧ ಅಂಗಡಿ-ಮುಂಗಟ್ಟುಗಳು ದೇವಸ್ಥಾನದ ಆವರಣದಲ್ಲಿ ಠಿಕಾಣಿ ಹೂಡಿದ್ದವು. ಜೋಕಾಲಿ, ತಂಪು ಪಾನೀಯಗಳ ಅಂಗಡಿಗಳು ಮಕ್ಕಳನ್ನು ಆಕರ್ಷಿಸಿದವು. ಬುಧವಾರ ಮಧ್ಯಾಹ್ನ ಜಂಗಿ ಪೈಲ್ವಾನರ ಕುಸ್ತಿಗಳು ರಾತ್ರಿ ಮದ್ದು ಸುಡುವ ಕಾರ್ಯಕ್ರಮ ಹಾಗೂ ನಾಟಕ ನಡೆಯಲಿದೆ.

ಏ.14ರ ವರೆಗೆ ರಾತ್ರಿ 10:30ಕ್ಕೆ ನಾಟಕ ಸಾಗಿಬರಲಿದೆ. ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ, ಕೊಡೆಕಲ್‌ ಅಭಿನಯಿಸುವ ಸಾಮಾಜಿಕ ನಾಟಕ ಮೂರು ದಿನ ನಡೆಯಲಿದೆ. ಏ. 12ರಂದು ರತ್ನ ಮಾಂಗಲ್ಯ ಅರ್ಥಾತ್‌ ಕಳ್ಳ ಗುರು ಸುಳ್ಳ ಶಿಷ್ಯ, 13ರಂದು ಸೊಕ್ಕಿನ ಸೊಸೆ ಅರ್ಥಾತ್‌ ತಾಯಿ ಕರುಳು ಮತ್ತು 14ರಂದು ರೇಣುಕಾ ಯಲ್ಲಮ್ಮ ಸಾಮಾಜಿಕ ನಾಟಕ ನಡೆಯಲಿವೆ.  

Advertisement

Udayavani is now on Telegram. Click here to join our channel and stay updated with the latest news.

Next